ಚುಟುಕು ಸುದ್ದಿಗಳು

Update: 2016-04-11 18:10 GMT

ಇಂದಿನ ಕಾರ್ಯಕ್ರಮ
ದೇವರ ದಾಸಿಮಯ್ಯ ಜಯಂತಿ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ ಸಮಾರಂಭ. ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ. ಸಮಯ: ಬೆಳಗ್ಗೆ 11ಕ್ಕೆ. ಸ್ಥಳ: ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣ, ಕುಂಜಿಬೆಟ್ಟು ಉಡುಪಿ.
ಕಾನೂನು ಸಾಕ್ಷರತಾ ರಥ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ, ಪಂಚಾಯತ್‌ರಾಜ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದಿರುವ ಕಾನೂನು ಸಾಕ್ಷರತಾ ರಥದ ಮೂಲಕ ಕಾನೂನು ಸಾಕ್ಷರತಾ ಕಾರ್ಯಕ್ರಮ. ಬೆಳಗ್ಗೆ 10ಕ್ಕೆ ಗ್ರಾಪಂ ಕಚೇರಿ, ಕೊಡಿಬೆಟ್ಟು ಹಾಗೂ ಅಪರಾಹ್ನ 2:30ಕ್ಕೆ ಗ್ರಾಪಂ ಕಚೇರಿ, ಬೊಮ್ಮರಬೆಟ್ಟು ಹಿರಿಯಡ್ಕ.ವಾರ್ಷಿಕೋತ್ಸವ: ಉಡುಪಿ ಯಕ್ಷರಂಗ-ಯಕ್ಷಗಾನ ಕೇಂದ್ರದ 45ನೆ ವಾರ್ಷಿಕೋತ್ಸವದ ಉದ್ಘಾಟನೆ ಅಪರಾಹ್ನ 2:30ಕ್ಕೆ. 3ರಿಂದ 5ರವರೆಗೆ ಪ್ರಸಿದ್ಧ ಅರ್ಥದಾರಿಗಳ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ‘ಕಾರ್ತವೀರ್ಯ’ ಸಂಜೆ 5ರಿಂದ 5:30ರವರೆಗೆ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ, 5:30ರಿಂದ 8ರವರೆಗೆ ಯಕ್ಷಗಾನ ಪ್ರದರ್ಶನ ‘ಜಾಂಬವತಿ ಕಲ್ಯಾಣ’. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ಉಡುಪಿ. ಪೇಜಾವರ ಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆಯಲ್ಲಿ ಪುರಾಣ ಡಾ.ಎಚ್.ಕೆ.ಸುರೇಶಾಚಾರ್ಯರ ಪ್ರವಚನ, 5ಕ್ಕೆ ರಾಜಾಂಗಣದಲ್ಲಿ ಪೊಳಲಿ ಜಗದೀಶ್ ದಾಸ್‌ರಿಂದ ಹರಿಕಥೆ ‘ಪಾದುಕಾ ಪ್ರಧಾನ’, 6ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ಮೈಸೂರಿನ ಎಚ್.ವಿ. ನಾಗರಾಜ್ ಇವರಿಂದ. 7ರಿಂದ ರಾಜಾಂಗಣದಲ್ಲಿ ಬೆಂಗಳೂರಿನ ಟಿ.ಎಸ್.ರಮಾ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. 7:30ಕ್ಕೆ ಅಖಂಡ ಸಪ್ತೋತ್ಸವ.

ಇಂದಿನಿಂದ ಕೂರತ್ ಇಸ್ಲಾಮಿಕ್ ಎಜುಕೇಶನ್ ಸೆಂಟರ್‌ನ ವಾರ್ಷಿಕೋತ್ಸವ
ಕಡಬ, ಎ.11: ಕುದ್ಮಾರು ಗ್ರಾಮದ ಬರೆಪ್ಪಾಡಿ ಕೂರತ್ ಅಲ್ ಫಝಲ್ ಇಸ್ಲಾಮಿಕ್ ಎಜುಕೇಶನ್ ಸೆಂಟರ್‌ನ 16ನೆ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಖಾಝಿ ಸ್ವೀಕಾರ, ಸುನ್ನತ್ ಜಮಾಅತಿನ ಉಲಮ ನೇತಾರರ ಅನುಸ್ಮರಣೆ ಹಾಗೂ ಭಾವೈಕ್ಯ ಸಮಾವೇಶವು ಎ.12ರಿಂದ 14ರಂದು ಕೂರತ್ ಜುಮಾ ಮಸೀದಿಯ ಫಝಲ್ ಪೂಕೋಯ ತಂಙಳ್ ವೇದಿಕೆಯಲ್ಲಿ ನಡೆಯಲಿದೆ ಎಂದು ಎಜುಕೇಶನ್ ಸೆಂಟರ್‌ನ ಅಧ್ಯಕ್ಷ ಕೆ.ಅಬೂಬಕರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಎ.12ರಂದು ಸಂಜೆ ಕೂರತ್ ಎಎಫ್‌ಐಇಸಿ ಸ್ಥಾಪಕಾಧ್ಯಕ್ಷ ಯೂಸುಫ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸುರಿಬೈಲ್‌ನ ದಾರುಲ್ ಅಶ್ ಅರಿಯ್ಯ ಪ್ರಾಂಶುಪಾಲ ಪಿ.ಎ. ಅಬ್ದುರ್ರಹ್ಮಾನ್ ಮುಸ್ಲಿಯಾರ್ ಜುನೈದಿ ಅಲ್ ಬಾಖವಿ ಪ್ರಭಾಷಣಗೈಯಲಿದ್ದು, ಗುರುವಾಯನಕೆರೆಯ ಅಸ್ಸೈಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಭಾಗವಹಿಸಲಿದ್ದಾರೆ. ಎ.13ರಂದು ಅಸ್ಸೈಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಕೊಲಾಂಡಿ ದುಆಶೀರ್ವಚನ ನೀಡಲಿದ್ದು, ಡಾ. ಫಾರೂಕ್ ನಈಮಿ ಕೊಲ್ಲಂ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಎ.14ರಂದು ನಡೆಯುವ ಭಾವೈಕ್ಯ ಸಮಾವೇಶದಲ್ಲಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಅಧ್ಯಕ್ಷತೆ ವಹಿಸಿ ದುಆಶೀರ್ವಚನ ನೀಡಲಿದ್ದಾರೆ. ಎ.ಪಿ. ಉಸ್ತಾದ್ ಕಾಂತಪುರಂ, ಅಸ್ಸೈಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್, ಉಡುಪಿ ಖಾಝಿ ಬೇಕಲ್ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ರಾಜ್ಯ ಹಜ್ ಸಚಿವ ರೋಶನ್ ಬೇಗ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ಎಜುಕೇಶನ್ ಸೆಂಟರ್‌ನ ಕಾರ್ಯದರ್ಶಿ ಸುಲೈಮಾನ್ ಅನ್ಯಾಡಿ, ಸದರ್ ಉಸ್ತಾದ್ ಅಬ್ದುಲ್ಲತೀಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News