ಲೇಖಕರ ಸಂಘದಿಂದ ಕಾವ್ಯ ರಚನಾ ಕಮ್ಮಟ

Update: 2016-04-11 18:16 GMT

ಬಿ.ಸಿ.ರೋಡ್, ಎ.11: ಸಾಹಿತ್ಯ ಎಂಬುದು ಜಾತಿ ಧರ್ಮಗಳಿಗೆ ಅತೀತವಾದುದಾಗಿದೆ. ಉತ್ತಮ ಸಾಹಿತ್ಯಗಳನ್ನು ಎಲ್ಲ ಧರ್ಮದವರು ಸ್ವೀಕರಿಸುತ್ತಾರೆ. ಅಂತಹ ಸಾಹಿತ್ಯಗಳು ಹೊರಬರಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು. ಇಲ್ಲಿನ ಶ್ರೀನಿವಾಸರಾವ್ ಕಾಂಪ್ಲೆಕ್ಸ್‌ನಲ್ಲಿ ಮುಸ್ಲಿಮ್ ಲೇಖಕರ ಸಂಘ ಮಂಗಳೂರು ಆಯೋಜಿಸಿದ ಕಾವ್ಯ ರಚನಾ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
 ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಿಪಟ್ಣ ಮತ್ತು ಕವಿ ಮುಹಮ್ಮದ್ ಬಡ್ಡೂರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಬಳಿಕ ಶಿಬಿರಾರ್ಥಿಗಳಿಂದ ಕವನಗಳನ್ನು ವಾಚಿಸಲಾಯಿತು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಕ್ರಮವಾಗಿ ಸುಮಯ್ಯಾ ಮರ್ಯಮ್, ಡಾ. ಪ್ರಶಾಂತ್ ಕುಮಾರ್ ಹಾಗೂ ಲುಕ್ಮಾನುಲ್ ಹಕೀಮ್ ಪಡೆದರು. ಸಂಘದ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ, ಮುಹಮ್ಮದ್ ಮುಹ್ಸಿನ್ ಮಂಗಳೂರು ಹಾಗೂ ಅಲಿ ಕುಂಞಿ ಪಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಬಿ.ಎ. ಮುಹಮ್ಮದಲಿ ಸಂಪನ್ಮೂಲ ವ್ಯಕ್ತಿಗಳ ಪರಿಚಯ ನೀಡಿದರು. ಸಾಹಿತ್ಯ ರಚನಾ ಕಮ್ಮಟದ ಸಂಚಾಲಕ ಸಲೀಮ್ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿದರು. ಕೇರಳದಲ್ಲಿ ಬಿಜೆಪಿಯ ಕನಸು ನನಸಾಗದು ಕಾಸರಗೋಡು, ಎ.11: ಈ ಚುನಾವಣೆಯೂ ಕಳೆದ ಐದು ವರ್ಷದ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಸರಕಾರದ ಆತ್ಮಾವಲೋಕನವಾಗಲಿದೆ ಎಂದು ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅಭಿಪ್ರಾಯಪಟ್ಟರು. ಸೋಮವಾರ ಜಿಲ್ಲೆಯ ಹಲವೆಡೆ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
    ಖಾತೆ ತೆರೆಯುವ ಕುರಿತು ಬಿಜೆಪಿ ಹಗಲುಗನಸು ಕಾಣುತ್ತಿದೆ. ಜನರಲ್ಲಿ ಒಡಕು ಉಂಟು ಮಾಡಿ ಒಂದು ಸ್ಥಾನವನ್ನಾದರೂ ಗಳಿಸ ಬೇಕು ಎಂಬುದು ಬಿಜೆಪಿಯ ಕನಸಾಗಿದೆ. ಕೇರಳದ ಜನತೆ ಇದಕ್ಕೆ ಅವಕಾಶ ನೀಡಲಾರರು ಎಂದ ಅವರು,ಪ್ರತಿಪಕ್ಷವಾದ ಸಿಪಿಎಂನ ಹಿಂಸಾತ್ಮಕ ನೀತಿಯಿಂದ ರಾಜ್ಯದಲ್ಲಿ ಹಲವು ಅಭಿವೃದ್ಧಿ ಚಟುವಟಿಕೆಗೆ ಹಿನ್ನಡೆ ಉಂಟಾಗಿದೆ. ಒಂದೂ ದಿನವು ಸುಗಮವಾಗಿ ವಿಧಾನಸಭಾ ಕಲಾಪ ನಡೆಸಲು ಪ್ರತಿಪಕ್ಷ ಅವಕಾಶ ನೀಡಿಲ್ಲ ಎಂದು ದೂರಿದರು.ಮೂರು ದಶಕಗಳಿಂದ ಜನರ ಬೇಡಿಕೆಯಾಗಿದ್ದ ಮಂಜೇಶ್ವರ ಮತ್ತು ವೆಳ್ಳರಿಕುಂಡು ತಾಲೂಕು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಐಕ್ಯರಂಗ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಬೆಳಗ್ಗೆ ತ್ರಿಕ್ಕರಿಪುರದಲ್ಲಿ ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದ ಸಮಾವೇಶ ನಡೆಯಿತು. ಬಳಿಕ ಕಾಞಂಗಾಡ್ ಕ್ಷೇತ್ರದ ಸಮಾವೇಶ ಪಳ್ಳಿಕೆರೆಯಲ್ಲಿ, ಉದುಮ ಕ್ಷೇತ್ರದ ಸಮಾವೇಶ ಚಟ್ಟಂಚಾಲ್‌ನಲ್ಲಿ, ಕಾಸರಗೋಡು ಕ್ಷೇತ್ರದ ಸಮಾವೇಶ ಕಾಸರಗೋಡಿನಲ್ಲಿ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸಮಾವೇಶ ಕುಂಬಳೆಯಲ್ಲಿ ನಡೆಯಲಿದೆ.

ಅಭ್ಯರ್ಥಿಗಳಾದ ತ್ರಿಕ್ಕರಿಪುರದ ಕೆ.ಪಿ. ಕುಂಞಿಕಣ್ಣನ್, ಉದುಮದ ಕೆ. ಸುಧಾಕರನ್, ಕಾಞಂಗಾಡ್‌ನ ಧನ್ಯಾ, ಕಾಸರಗೋಡಿನ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರದ ಪಿ.ಬಿ. ಅಬ್ದುರ್ರಝಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ. ಶ್ರೀಧರನ್, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ, ಸಿ.ಟಿ. ಅಹ್ಮದಾಲಿ, ಎಂ.ಸಿ. ಖಮರುದ್ದೀನ್, ಮಾಹಿನ್ ಕೇಳೋಟ್, ಕೆ. ನೀಲಕಂಠನ್ ಉಪಸ್ಥಿತರಿದ್ದರು. ಪ್ರತಿ ತಿಂಗಳು 3,500 ವಾಹನಗಳು ನೋಂದಣಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News