ಪುತ್ತೂರು ತಾಲೂಕು: ಗ್ರಾಪಂ ಉಪಚುನಾವಣೆ; 9 ನಾಮಪತ್ರಗಳ ಹಿಂದೆಗೆತ

Update: 2016-04-11 18:35 GMT

ಪುತ್ತೂರು, ಎ.11: ತಾಲೂಕಿನ ಆರು ಗ್ರಾಪಂಗಳ ತಲಾ ಒಂದು ಸ್ಥಾನಗಳಿಗೆ ಎ.17ರಂದು ನಡೆಯ ಲಿರುವ ಚುನಾವಣೆಗೆ ಸಂಬಂಧಿಸಿದಂತೆ ಎ.11ರಂದು ನಾಮಪತ್ರ ಹಿಂದೆಗೆದುಕೊಳ್ಳುವ ಪ್ರಕ್ರಿಯೆ ಅಂತಿಮಗೊಂಡಿದ್ದು, ಐದು ಗ್ರಾಪಂಗಳಲ್ಲಿ ಒಟ್ಟು 9 ಮಂದಿ ಅಭ್ಯರ್ಥಿಗಳು ನಾಮಪತ್ರ ಹಿಂದೆೆಗೆದುಕೊಂಡಿದ್ದಾರೆ.

ನೆಟ್ಟಣಿಗೆ ಮುಡ್ನೂರು ಗ್ರಾಪಂನಲ್ಲಿ 6ನೆ ವಾರ್ಡ್‌ನ ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿದ್ದು, ಇಲ್ಲಿ ಉಮ್ಮರ್ ಪಿ. ಈಶ್ವರಮಂಗಲ ಹಾಗೂ ರಮೇಶ್ ಪೂಜಾರಿ ಮುಂಡ್ಯ ನಾಮಪತ್ರ ಹಿಂದೆಗೆದು ಕೊಂಡಿದ್ದಾರೆ. ಕಡಬ ಗ್ರಾಪಂನ ಕೋಡಿಂಬಾಳ 2 ವಾರ್ಡ್‌ನ ‘ಸಾಮಾನ್ಯ’ ಸ್ಥಾನಕ್ಕೆ ಮೀಸಲಾದ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅನೀಶ್ ಮ್ಯಾಥ್ಯೂ ಕೋಡಿಂಬಾಳ ನಾಮಪತ್ರ ಹಿಂದೆಗೆದುಕೊಂಡಿರುತ್ತಾರೆ.

ನೂಜಿಬಾಳ್ತಿಲ ಗ್ರಾಪಂನ 1ನೆ ವಾರ್ಡ್ ಸಾಮಾನ್ಯ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಬೆಂಬಲಿತ ಪಿ.ಪಿ. ಎಲಿಯಾಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹರಿಪ್ರಸಾದ್ ಎನ್ಕಾಜೆ ನಾಮಪತ್ರ ಹಿಂದೆಗೆದುಕೊಂಡಿದ್ದಾರೆ. ಕೊಳ್ತಿಗೆ ಗ್ರಾಪಂನ ಮೂರನೆ ವಾರ್ಡ್‌ನ ‘ಅನುಸೂಚಿತ ಜಾತಿ’ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ನ ಕಂದಸ್ವಾಮಿ ಹಾಗೂ ಬಿಜೆಪಿಯ ಕನಕರಾಜ್ ನಾಮಪತ್ರ ಹಿಂದೆಗೆದುಕೊಂಡಿದ್ದಾರೆ.

ಅರಿಯಡ್ಕ ಗ್ರಾಪಂನ ‘ಸಾಮಾನ್ಯ ಮಹಿಳೆ’ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಚೇತಾ ರೈ ಡೆಂಬಾಳೆ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುನೀತಾ ಮಾಣಿಯಡ್ಕ ನಾಮಪತ್ರ ಹಿಂದೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News