ಕಾನೂನು ಪದವೀಧರರಿಗೆ ನೇಮಕಾತಿ ಸಂದರ್ಶನ

Update: 2016-04-11 18:37 GMT

ಮಂಗಳೂರು, ಎ.11: ಕಾನೂನು ಪದವೀಧರರಿಗೆ ನಗರದ ಎಸ್‌ಡಿಎಂ ಕಾನೂನು ಕಾಲೇಜು ಆವರಣದಲ್ಲಿ ಎ.15ರಿಂದ 18ರವರೆಗೆ ವಿವಿಧ ಕಂಪೆನಿಗಳಿಗೆ ನೇಮಕಾತಿ ಸಂದರ್ಶನ ಏರ್ಪಡಿಸಲಾಗಿದೆ. ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೊಳಪಟ್ಟ 93 ಕಾನೂನು ಕಾಲೇಜುಗಳ ಕಾನೂನು ಪದವೀಧರ ಅಭ್ಯರ್ಥಿಗಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎಲ್‌ಎಲ್‌ಎಂ, ಎಲ್‌ಎಲ್‌ಬಿಯ ಅಂತಿಮ ಸೆಮಿಸ್ಟರ್‌ನಲ್ಲಿರುವವರು, ಪದವಿ ಪೂರೈಸಿರುವವರು ಹಾಗೂ ಈಗಾಗಲೇ ಪದವಿ ಮುಗಿಸಿ ವಕೀಲಿ ವೃತ್ತಿಯಲ್ಲಿ ತೊಡಗಿರುವ ಅನುಭವಿಗಳೂ ಭಾಗವಹಿಸಬಹುದು. ಲೀಗಲ್ ಅಡ್ವೈಸ್, ಕನ್ಸಲ್ಟೆನ್ಸಿ, ಡಾಕ್ಯುಮೆಂಟೇಶನ್, ಲಿಟಿಗೇಶನ್ ಆ್ಯಂಡ್ ನಾನ್ ಲಿಟಿಗೇಶನ್ ಹಾಗೂ ಲಾ ಫರ್ಮ್‌ನಲ್ಲಿರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈಗಾಗಲೇ ದೇಶದ ಪ್ರಖ್ಯಾತ 7 ಸಂಸ್ಥೆ/ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅಭ್ಯರ್ಥಿಗಳಿಗೆ ಉಚಿತ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಮಾಹಿತಿಗಾಗಿ ಹಾಗೂ ಭಾಗವಹಿಸಲು ಇಚ್ಚಿಸುವವರು ಎಸ್ಸೆಮ್ಮೆಸ್ ಮೂಲಕ ಮೊಬೈಲ್ (ಸಂತೋಷ್ ಪ್ರಭು 9449334560) ಸಂಖ್ಯೆಯನ್ನು ಸಂಪರ್ಕಿಸಬಹುದು. ಅಥವಾ sdmlawplacements@gmail.comಗೆ ಇಮೇಲ್ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News