ಕಗ್ಗತ್ತಲ ಕೂಪದಲ್ಲಿ ಬಿ.ಸಿ.ರೋಡ್ ಮುಖ್ಯವೃತ್ತ: ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ

Update: 2016-04-12 18:17 GMT

ಬಂಟ್ವಾಳ, ಎ.12: ಕೋಮು ಸೂಕ್ಷ್ಮಪ್ರದೇಶವಾಗಿರುವ ಬಿ.ಸಿ.ರೋಡಿನ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಬೀದಿದೀಪಗಳೇ ಇಲ್ಲ. ಅದರಲ್ಲೂ ಬಿ.ಸಿ.ರೋಡಿನ ಮುಖ್ಯವೃತ್ತದಲ್ಲಿ ಬೀದಿದೀಪ ಇಲ್ಲದಿ ರುವುದರಿಂದ ರಾತ್ರಿಯಾಗುತ್ತಿದ್ದಂತೆ ಈ ಪ್ರದೇಶದಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ. ಇದು ಸ್ಥಳೀಯ ನಾಗರಿ ಕರಿಗೆ ಹಾಗೂ ಪ್ರಯಾಣಿಕರಿಗೆ ಅಪಾಯ ಕಾರಿಯಾಗಿ ಪರಿಣಮಿಸಿದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಒಳ ಪಟ್ಟಿರುವ ಬಿ.ಸಿ.ರೋಡ್ ಮುಖ್ಯವೃತ್ತದಲ್ಲಿ ಐದು ರಸ್ತೆಗಳು ಸಂಗಮಿಸುತ್ತವೆ. ವೃತ್ತದಲ್ಲಿ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದರಿಂದ ಹಾಗೂ ಕಿರಿದಾದ ವೃತ್ತವಾಗಿರುವುದರಿಂದ ದಿನನಿತ್ಯ ಟ್ರಾಫಿಕ್ ಜಂಜಾಟವೂ ಇರುತ್ತದೆ. ಬೀದಿದೀಪಗಳಿಲ್ಲದೆ ರಾತ್ರಿ ಹೊತ್ತು ವೃತ್ತದಲ್ಲಿ ಸಂಪೂರ್ಣ ಕತ್ತಲೆ ಆವರಿಸುವುದರಿಂದ ಇಲ್ಲಿ ಅಪಘಾತಗಳು ಸಂಭವಿಸುವ ಸಂದರ್ಭಗಳೇ ಹೆಚ್ಚು. ಬೆಂಗಳೂರು, ಮೈಸೂರು ಮೊದಲಾ ದೆಡೆಗಳಿಂದ ಮಧ್ಯರಾತ್ರಿ ವೇಳೆ ಬರುವ ಪ್ರಯಾಣಿಕರನ್ನು ಈ ವೃತ್ತದ ಬಳಿ ಬಸ್ ಚಾಲಕರು ಇಳಿಸಿ ಹೋಗುತ್ತಾರೆ.

ಈ ಸಂದರ್ಭ ಇಲ್ಲಿನ ಕತ್ತಲಲ್ಲಿ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವೃತ್ತದ ಅನತಿ ದೂರದಲ್ಲಿ ರೈಲು ನಿಲ್ದಾಣವಿದ್ದು, ರಾತ್ರಿ ಸಮಯದಲ್ಲಿ ರೈಲಿನಲ್ಲಿ ಬರುವ ಪ್ರಯಾಣಿಕರು ಟ್ಯಾಕ್ಸಿಗಾಗಿ ಕಗ್ಗತ್ತಲಲ್ಲೇ ನಿಂತು ಕಾಯುವ ಸ್ಥಿತಿ ಇಲ್ಲಿದ್ದಾಗಿದೆ. ಈ ಸಮಸ್ಯೆಗಳ ಬಗ್ಗೆ ಪುರಸಭೆಯಲ್ಲಿ ಚರ್ಚೆಗಳು ನಡೆದಿವೆ. ಸ್ಥಳೀಯರೂ ಹಲವಾರು ಬಾರಿ ಪುರಸಭೆಯ ಗಮನ ಸೆಳೆದಿದ್ದಾರೆ. ಆದರೆ, ಅಧಿಕಾರಿಗಳು, ಅಧಿಕಾರದ ಚುಕ್ಕಾಣಿ ಹಿಡಿದವರು ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಬಿ.ಸಿ.ರೋಡ್ ಮುಖ್ಯವೃತ್ತದ ಸಮಸ್ಯೆಯನ್ನು ಇನ್ನಾದರೂ ಪರಿಹರಿಸ ಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿ ಗಳು ಸ್ಪಂದಿಸಬೇಕಾಗಿದೆ.

ಕಾರ್ಯರೂಪಕ್ಕೆ ಬರುವುದೇ ನಿರ್ಣಯ?
ಕಳೆದ ತಿಂಗಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಬಿ.ಸಿ.ರೋಡ್‌ನ ಮುಖ್ಯ ವೃತ್ತಕ್ಕೆ ತುರ್ತಾಗಿ ದಾರಿದೀಪ ಅಳವಡಿಸುವಂತೆ ಸದಸ್ಯ ಬಿ.ದೇವದಾಸ ಶೆಟ್ಟಿ ಗಮನ ಸೆಳೆದಿದ್ದರು. ಇದಕ್ಕೆ ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸಭೆ ನಿರ್ಣಯವನ್ನು ಕೈಗೊಂಡಿದೆ. ಆದರೆ, ಇಂತಹ ಹಲವಾರು ನಿರ್ಣಯಗಳು ಕಡತಗಳಲ್ಲೇ ಬಾಕಿಯಾಗಿರುವಾಗ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಕಾದು ನೋಡಬೇಕಿದೆ.

ಕೋಮುಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿಗೆ ಒಳಗಾಗಿರುವ ಬಿ.ಸಿ.ರೋಡ್‌ನ ಪ್ರಮುಖ ವೃತ್ತದಲ್ಲಿ ಹಾಗೂ ಮೇಲ್ಸೇತುವೆಯ ಕೆಲವು ಭಾಗದಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು. ಮಧ್ಯರಾತ್ರಿ ದೂರದ ಊರಿನಿಂದ ಬರುವ ಪ್ರಯಾಣಿಕರು ದರೋಡೆಕೋರರ ಭೀತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಬೀದಿದೀಪಗಳ ಜೊತೆಗೆ ಸಿಸಿಟಿವಿಗಳನ್ನೂ ಅಳವಡಿಸಲು ಪುರಸಭೆ ಹಾಗೂ ಪೊಲೀಸ್ ಇಲಾಖೆ ಮುಂದಾಗಬೇಕು.

-ಬಿ.ಎಂ.ಪ್ರಭಾಕರ್ ದೈವಗುಡ್ಡೆ

ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಹೆಸರಿಸಿ ಪುರಸಭೆ ಶಿಫಾರಸು ಮಾಡಿದೆ. ನಾರಾಯಣಗುರು ಟ್ರಸ್ಟ್‌ನಿಂದ ಶೀಘ್ರದಲ್ಲೇ ಹೊಸ ವೃತ್ತ ನಿರ್ಮಾಣವಾಗಲಿದೆ. ಬಳಿಕ ವೃತ್ತಕ್ಕೆ ಹೈಮಾಸ್ಟ್ ದೀಪ ಅಳ ವಡಿಸಲ ು ಕ್ರಮ ತೆಗೆದುಕೊಳ್ಳಲಾಗುವುದು. ರೈಲು ನಿಲ್ದಾಣದಿಂದ ವೃತ್ತದವರೆಗೆ ಬೀದಿದೀಪ ಅಳವಡಿಸಲು 1.86 ಲಕ್ಷ ರೂ. ಅನುದಾನ ಮಂಜೂರಾಗಿದೆ.

-ರಾಮಕೃಷ್ಣ ಆಳ್ವ, ಬಂಟ್ವಾಳ ಪುರಸಭೆ ಅಧ್ಯಕ್ಷರು


ಬಿ.ಸಿ.ರೋಡ್ ಮುಖ್ಯವೃತ್ತದಲ್ಲಿ ಹೊಸ ವೃತ್ತ ನಿರ್ಮಾಣವಾದ ಬಳಿಕ ಹೈಮಾಸ್ಟ್ ದೀಪ ಅಳವಡಿಸುವುದಾಗಿ ಬಂಟ್ವಾಳ ಪುರಸಭೆ ತಿಳಿಸಿದೆ. ದಾನಿಗಳ ನೆರವಿನೊಂದಿಗೆ ಸಿಸಿ ಕ್ಯಾಮರಾ ಅಳವಡಿಸಲಾಗುವುದು. -

ಚಂದ್ರಶೇಖರಯ್ಯ, ಬಂಟ್ವಾಳ ಟ್ರಾಫಿಕ್ ಎಸ್ಸೈ

Writer - ಎಂ.ಇಮ್ತಿಯಾಝ್ ತುಂಬೆ

contributor

Editor - ಎಂ.ಇಮ್ತಿಯಾಝ್ ತುಂಬೆ

contributor

Similar News