ರೈಲು ಢಿಕ್ಕಿಯಾಗಿ ಮಹಿಳೆ ಮೃತ್ಯು

Update: 2016-04-12 18:33 GMT

 ಕಾಸರಗೋಡು, ಎ.12: ರೈಲು ಢಿಕ್ಕಿಯಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಮೊಗ್ರಾಲ್ ಕಲ್ಲಂಗೈಯಲ್ಲಿ ನಡೆದಿದೆ. ಮೃತಪಟ್ಟವರನ್ನು ಬೆದ್ರಡ್ಕದ ಕಮಲಾ (65) ಎಂದು ಗುರುತಿಸಲಾಗಿದೆ.

 ಮೊಗ್ರಾಲ್ ಪುತ್ತೂರು ಪಂಚಾಯತ್ ಕಚೇರಿಯ ಹಿಂಭಾಗ ಕಲ್ಲಂಗೈ ಎಂಬಲ್ಲಿ ರೈಲೆ ಹಳಿ ದಾಟುತ್ತಿದ್ದ ಸಂದರ್ಭ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಕಾಸರಗೋಡು ಪೊಲೀಸರು ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News