ಬಂಟ್ವಾಳದ 28 ಮಂದಿಗೆ ವೈದ್ಯಕೀಯ ವೆಚ್ಚಕ್ಕಾಗಿ 7.78 ಲಕ್ಷ ರೂ. ಬಿಡುಗಡೆ

Update: 2016-04-13 13:08 GMT

 ಬಂಟ್ವಾಳ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಶಿಫಾರಸಿನಂತೆ ಬಂಟ್ವಾಳ ಕ್ಷೇತ್ರದ 28 ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ವೆಚ್ಚಕ್ಕೆ ಒಟ್ಟು 7.78 ಲಕ್ಷ ರೂ. ಬಿಡುಗಡೆಗೊಂಡಿದೆ ಎಂದು ಸಚಿವರ ಕಚೇರಿ ಪ್ರಕಟನೆ ತಿಳಿಸಿದೆ. ಬಾಳ್ತಿಲ ಗ್ರಾಮದ ರತ್ನಾಕರ ರೈ ಅವರಿಗೆ, 71 ಸಾವಿರ ರೂ., ಕುಡಂಬೆಟ್ಟು ಗ್ರಾಮದ ಬೀಪಾತುಮ್ಮ ಅವರಿಗೆ 54 ಸಾವಿರ ರೂ., ಬಿ.ಕಸ್ಬಾ ಗ್ರಾಮದ ಬಿ.ಎಂ.ಅಬ್ದುಲ್ ರಹಿಮಾನ್, ಸಜೀಪ ಮುನ್ನೂರು ಗ್ರಾಮದ ರಿಯಾರ್ ಅವರಿಗೆ ತಲಾ 50 ಸಾವಿರ ರೂ., ಸರಪಾಡಿ ಗ್ರಾಮದ ಫೆಡ್ರಿಕ್ ಮೊರಸ್, ಕೊಳ್ನಾಡು ಗ್ರಾಮದ ಉಮ್ಮರ್, ಅಮ್ಟಾಡಿ ಗ್ರಾಮದ ವಸಂತ್ ಬೆಂಜನ್, ಕಾವಳಮುಡೂರು ಗ್ರಾಮದ ಮಹಮ್ಮದ್ ಪೀರ್ ಸಾಹೇಬ್ ಅವರಿಗೆ ತಲಾ 40 ಸಾವಿರ ರೂ., ಬಡಗಕಜೆಕಾರು ಗ್ರಾಮದ ಖತೀಜಾಬಾನು ಅವರಿಗೆ 33 ಸಾವಿರ ರೂ., ಅಮ್ಟಾಡಿ ಗ್ರಾಮದ ಆಶಾಲತಾ, ಕುರಿಯಾಳ ಗ್ರಾಮದ ಕರುಣಾಕರ ಶೆಟ್ಟಿ, ಅವರಿಗೆ ತಲಾ 30 ಸಾವಿರ ರೂ., ಮೂಡನಡುಗೋಡು ಗ್ರಾಮದ ಮೀನಾಕ್ಷಿ ಅವರಿಗೆ 28 ಸಾವಿರ ರೂ., ಕಾಡಬೆಟ್ಟು ಗ್ರಾಮದ ಚಾರ್ಲಿ ಲೋಬೋ ಅವರಿಗೆ 25 ಸಾವಿರ ರೂ., ಸಜೀಪಮುನ್ನೂರು ಗ್ರಾಮದ ಬೇಬಿ ರಿನಾ ಫಾತಿಮಾ, ಸಜೀಪಮುನ್ನೂರು ಗ್ರಾಮದ ಆಸ್ಯಮ್ಮ, ಕರೋಪಾಡಿ ಗ್ರಾಮದ ರಾಜೀವ ಶೆಟ್ಟಿ, ಸರಪಾಡಿ ಗ್ರಾಮದ ಆಸೀಫ್ ರಹಿಮಾನ್, ಕಾವಳಮುಡೂರು ಗ್ರಾಮದ ಬಾಲಕೃಷ್ಣ ಅಂಚನ್, ಬಡಗಬೆಳ್ಳೂರು ಗ್ರಾಮದ ಚಂದ್ರಕಲಾ, ಸಾಲೆತ್ತೂರು ಗ್ರಾಮದ ಸುಮನಾ ಶೆಟ್ಟಿ ಅವರಿಗೆ ತಲಾ 20 ಸಾವಿರ ರೂ., ಮಂಚಿ ಗ್ರಾಮದ ಜಯಂತಿ, ಕನ್ಯಾನ ಗ್ರಾಮದ ಕುಂಞಲಿಮ್ಮ ಅವರಿಗೆ ತಲಾ 17 ಸಾವಿರ ರೂ., ಸಜೀಪಮುನ್ನೂರು ಗ್ರಾಮದ ಅಬ್ದುಲ್ ರಝಾಕ್ ಅವರಿಗೆ 14 ಸಾವಿರ ರೂ., ಕಾವಳಪಡೂರು ಗ್ರಾಮದ ವಿಶ್ವನಾಥ ಅವರಿಗೆ 12 ಸಾವಿರ ರೂ., ಬಾಳ್ತಿಲ ಗ್ರಾಮದ ಜಲಜಾಕ್ಷಿ ಅವರಿಗೆ 11 ಸಾವಿರ ರೂ., ಸಜೀಪಮುನ್ನೂರು ಗ್ರಾಮದ ಆತಿಫ್, ವಿಟ್ಲಪಡ್ನೂರು ಗ್ರಾಮದ ಜೈನಾಬಿ, ಮಂಚಿ ಗ್ರಾಮದ ಉಮ್ಮರ್ ಅವರಿಗೆ ತಲಾ 10 ಸಾವಿರ ರೂ. ಪರಿಹಾರ ನಿಧಿ ಬಿಡುಗಡೆಗೊಂಡಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News