ಮಂಗಳೂರಿನಲ್ಲೇ ಪ್ರಥಮ ಬಾರಿಗೆ ಪ್ರಪಂಚದ 7 ಅದ್ಭುತಗಳ ಮಾದರಿ ಪ್ರದರ್ಶನ

Update: 2016-04-13 15:34 GMT

ಮಂಗಳೂರು, ಎ. 14: ನಗರದ ಹೊರವಲಯದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಎಪ್ರಿಲ್ 14ರಿಂದ ‘ಮಂಗಳೂರು ಸಮ್ಮರ್ ಫೆಸ್ಟಿವಲ್-2016’ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಈ ಸಮ್ಮರ್ ಫೆಸ್ಟಿವಲ್‌ನಲ್ಲಿ ಮಂಗಳೂರಿನಲ್ಲೇ ಪ್ರಥಮ ಬಾರಿಗೆ ಪ್ರಪಂಚದ 7 ಅದ್ಭುತಗಳ ಮಾದರಿ ಪ್ರದರ್ಶನ ನಡೆಯಲಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಸಂಜೆ 5:30ಕ್ಕೆ ಸಮ್ಮರ್ ಫೆಸ್ಟಿವಲ್‌ನ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮೇಯರ್ ಹರಿನಾಥ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಸ್ನೋ ವರ್ಲ್ಡ್, ಅಮ್ಯೂಸ್‌ಮೆಂಟ್ ಪಾರ್ಕ್, ಶಾಪಿಂಗ್, ಆಹಾರ ಮಳಿಗೆ ಮೊದಲಾದವುಗಳು ವಸ್ತುಪ್ರದರ್ಶನದಲ್ಲಿ ಲಭ್ಯವಿದೆ. ಎಪ್ರಿಲ್ 14ರಿಂದ ಪ್ರತಿ ದಿನ ಮಧ್ಯಾಹ್ನ 3:30 ಗಂಟೆಗೆ ಆರಂಭಗೊಳ್ಳುವ ಈ ಪೆಸ್ಟಿವರ್ 45 ದಿನಗಳ ಕಾಲ ನಡೆಯಲಿದೆ ಎಂದು ರಾಯಲ್ ಕಾರ್ನಿವಲ್‌ನ ಮುಷ್ತಾಕ್ ಖತೀಬ್ ಮತ್ತು ಸೈಯ್ಯದ್ ಹಫೀಝ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News