ಮುಹಮ್ಮದ್ ಹಫೀಝ್ ಸ್ವಲಾಹಿಗೆ ಡಾಕ್ಟರೇಟ್

Update: 2016-04-13 18:08 GMT

ಮಂಗಳೂರು, ಎ.13: ಅಲೀಘಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಮುಹಮ್ಮದ್ ಹಫೀಝ್ ಸ್ವಲಾಹಿಯವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಸಲ್ಲಿಸಿದ ‘ಎಜುಕೇಶನಲ್ ಡೆವಲಪ್‌ಮೆಂಟ್ ಆಫ್ ಮುಸ್ಲಿಮ್ಸ್ ಇನ್ ಕರ್ನಾಟಕ’ ಎಂಬ ಸಂಶೋಧನಾತ್ಮಕ ಮಹಾಪ್ರಬಂಧಕ್ಕೆ ಅಲೀಘಡ ಮುಸ್ಲಿಮ್ ವಿವಿ ಡಾಕ್ಟರೇಟ್ ಪದವಿ ನೀಡಿದೆ.

ಖ್ಯಾತ ಇತಿಹಾಸಕಾರ ಹಾಗೂ ಅಲೀಘಡ ಮುಸ್ಲಿಮ್ ವಿವಿ ಇಸ್ಲಾಮಿ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ಝಫರುಲ್ ಇಸ್ಲಾಮ್‌ರ ಮಾರ್ಗದರ್ಶನದಲ್ಲಿ ಹಫೀಝ್ ಸ್ವಲಾಹಿ ಈ ಸಂಶೋಧನೆಯನ್ನು ಕೈಗೊಂಡಿದ್ದರು.

 ಇವರು ತೊಕ್ಕೊಟ್ಟು ಸಮೀಪದ ಕಲ್ಲಾಪು-ಪಟ್ಲ ನಿವಾಸಿಯಾದ ದಿ.ಉಮರಬ್ಬ ಯು.ಪಿ ಮತ್ತು ಝೈನಬಾ ದಂಪತಿಯ ಪುತ್ರ. ಕರ್ನಾಟಕ ಸಲಫಿ ಅಸೋಸಿಯೇಶನ್‌ನ ಸಲಹಾ ಸಮಿತಿ ಸದಸ್ಯರಾಗಿರುವ ಇವರು ಪ್ರಸ್ತುತ ಮಂಗಳೂರಿನ ಹುದಾ ಇಸ್ಲಾಮಿಕ್ ಸ್ಕೂಲ್‌ನಲ್ಲಿ ಇಸ್ಲಾಮಿ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News