ಯುಎಇ ಎಕ್ಸ್‌ಚೇಂಜ್‌ನಿಂದ ಶಾಲೆಗೆ ಕಂಪ್ಯೂಟರ್ ವಿತರಣೆ

Update: 2016-04-14 10:45 GMT

ಮೂಡುಬಿದಿರೆ, ಎ. 14: ಹೊಸ್ಮಾರಿನ ಗುರುಕೃಪಾ ಸೆಂಟ್ರಲ್ ಸ್ಕೂಲ್‌ಗೆ ಯುಎಇ ಎಕ್ಸ್‌ಚೇಂಜ್ ವತಿಯಿಂದ 2 ಕಂಪ್ಯೂಟರ್ ಮತ್ತು 1 ಪ್ರಿಂಟರನ್ನು ಯುಎಇ ಎಕ್ಸ್‌ಚೇಂಜ್‌ನ ನಿರ್ದೇಶಕ ಬಿ.ಸಚ್ಚಿದಾನಂದ ಶೆಟ್ಟಿ ಅವರು ಗುರುವಾರ ಕೊಡುಗೆಯಾಗಿ ನೀಡಿದರು.

ಗುರುಕೃಪಾ ಸೆಂಟ್ರಲ್ ಸ್ಕೂಲ್‌ನ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಉತ್ತೀರ್ಣತಾ ಪತ್ರ ವಿತರಣಾ ಸಂದರ್ಭದಲ್ಲಿ ಬಲ್ಯೊಟ್ಟು ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಸರಳ ಶಿಕ್ಷಣವನ್ನು ನೀಡಿ ಸುಸಂಸ್ಕೃತರಾಗಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಅದರಂತೆ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮಕ್ಕಳ ಏಳಿಗೆ ವ್ಯಾಮೋಹದಿಂದ ಸಾಧ್ಯವಿಲ್ಲ. ಬದಲಾಗಿ ಉತ್ತಮ ಶಿಕ್ಷಣದಿಂದ ಸಾಧ್ಯವಿದೆ ಎಂದು ಹೆತ್ತವರಿಗೆ ಕಿವಿ ಮಾತು ಹೇಳಿದರು. ಸಚ್ಚಿದಾನಂದ ಶೆಟ್ಟಿ ಮಾತನಾಡಿ, ಹಳ್ಳಿಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿರುವ ಗುರುಕೃಪಾ ಶಿಕ್ಷಣ ಸಂಸ್ಥೆಯ ಬಗ್ಗೆ ಉತ್ತಮ ಗೌರವವಿದೆ. ಮುಂದೆಯೂ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಈದು ಗ್ರಾಪಂ ಅಧ್ಯಕ್ಷ ಪುರುಷೋತ್ತಮ್, ಯುಎಇ ಎಕ್ಸ್‌ಚೇಂಜ್‌ನ ಪ್ರಾದೇಶಿಕ ಪ್ರಬಂಧಕ ಶರತ್ ಶೆಟ್ಟಿ, ಆಳ್ವಾಸ್ ನರ್ಸಿಂಗ್ ಇನ್ಸ್‌ಟ್ಯೂಟ್‌ನ ಪ್ರಾಂಶುಪಾಲೆ ಶೈಲಾ, ಸಹ ಪ್ರಾಂಶುಪಾಲ ಆದರ್ಶ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಯುಎಇ ಎಕ್ಸ್‌ಚೇಂಜ್‌ನ ಮೂಡುಬಿದಿರೆ ಶಾಖೆಯ ಪ್ರಬಂಧಕ ಲೋಕೇಶ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ವಿನಂತಿ ಜೈನ್, ಶಿಕ್ಷಕ ಯತೀಂದ್ರ ಅತ್ತಾವರ್ ಉಪಸ್ಥಿತರಿದ್ದರು. ಶಿಕ್ಷಕಿ ಆಶಾಲತಾ ಭಟ್ ಸ್ವಾಗತಿಸಿದರು. ಲಲಿತಾ ವಿದ್ಯಾರ್ಥಿಗಳ ವಿವರ ನೀಡಿದರು. ಶಿಕ್ಷಕ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಮೋಹಿನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News