ಕಾಸರಗೋಡು : ಕಾರು ಮಗುಚಿ ಬಿದ್ದು ಆರು ಮಂದಿಗೆ ಗಾಯ

Update: 2016-04-14 13:03 GMT

ಕಾಸರಗೋಡು :  ವಿವಾಹ ತಂಡ  ಸಂಚರಿಸಿದ್ದ  ಕಾರು   ಮಗುಚಿ ಬಿದ್ದು  ಆರು ಮಂದಿ  ಗಾಯಗೊಂಡ ಘಟನೆ  ಗುರುವಾರ ಸಂಜೆ   ರಾಷ್ಟ್ರೀಯ ಹೆದ್ದಾರಿಯ   ಪೊಯಿನಾಚಿ ಯಲ್ಲಿ ನಡೆದಿದೆ. ಕಾನ್ಚ೦ಗಾಡ್ ನ   ತನ್ವೀರ್ (21) , ಅಸ್ಗರ್ (22) , ಶಾಮಿಲ್ (18), ಅಸ್ಗರ್ (25), ಇಲ್ಯಾಸ್ (24) ಮತ್ತು ಅಸ್ಮರ್ (17)  ಗಾಯಗೊಂಡವರು. 

ತನ್ವೀರ್ ಮತ್ತು ಅಸ್ಗರ್ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.  

ಚಟ್ಟ೦ಚಾಲ್ ನ ವಧುವಿನ ಮನೆಯಿಂದ  ಬಲ್ಲ ಕಡಪ್ಪುರ ದ  ವರನ ಮನೆಗೆ ತೆರಳುತ್ತಿದ್ದಾಗ  ಇಳಿಜಾರಿನಲ್ಲಿ ಅಟೋ ಗೆ  ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ  ನಿಯಂತ್ರಣ ತಪ್ಪಿ  ಮಗುಚಿ ಬಿದ್ದು  ಈ ದುರ್ಘಟನೆ ಸಂಭವಿಸಿದೆ. 

ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News