ಪುತ್ತೂರು: ತಾಲೂಕಿನಲ್ಲಿ ರೂ. ರೂ. 85,16,280 ವಿನಿಯೋಗ- ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್.

Update: 2016-04-15 11:48 GMT

 ಪುತ್ತೂರು: ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ 2015-16ನೇ ಸಾಲಿನ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಶಾಲಾ ನಿರ್ವಹಣೆ ಮತ್ತು ದುರಸ್ಥಿಗಳಿಗೆ ಸಮವಸ್ತ್ರ ಮತ್ತಿತರ ಅಗತ್ಯ ಕೆಲಸಗಳಿಗೆ ಪುತ್ತೂರು ತಾಲೂಕಿನಲ್ಲಿ ಒಟ್ಟು ರೂ. 85,16,280 ಅನುದಾನವನ್ನು ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾಲೂಕಿನಲ್ಲಿ 182 ಸರ್ಕಾರಿ ಮತ್ತು 12 ಅನುದಾನಿತ ಪ್ರಾಥಮಿಕ ಶಾಲೆಗಳಿದ್ದು, ಈ ಶಾಲೆಗಳಿಗೆ ಒಟ್ಟು 21.05.000 ಶಾಲಾ ಅನುದಾನ ನೀಡಲಾಗಿದೆ. ಶಾಲಾ ನಿರ್ವಹಣೆ ಮತ್ತು ದುರಸ್ತಿಗಾಗಿ ರೂ.24,67.500 ನೀಡಲಾಗಿದೆ. ಸಮವಸ್ತ್ರವನ್ನು ಯೋಜನೆಯಡಿ ನೀಡಲಾಗಿದ್ದು, ಪ್ರತೀ ವಿದ್ಯಾರ್ಥಿಗೆ ರೂ. 200ರಂತೆ ಒಟ್ಟು ರೂ. 31,59.400 ಒದಗಿಸಲಾಗಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ 4 ಶಾಲೆಗಳಿಗೆ ತಲಾ ರೂ. 2ಸಾವಿರದಂತೆ ಒಟ್ಟು ರೂ. 8 ಸಾವಿರ ವಿನಿಯೋಗಿಸಲಾಗಿದೆ. ಕೇಂದ್ರ ಸರ್ಕಾರದ ಬಾಲಸ್ವಚ್ಚ ವಿದ್ಯಾಲಯ ಯೋಜನೆಯಡಿಯಲ್ಲಿ ರೂ.1 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ವಿಶೇಷ ಅಗತ್ಯವಿರುವ ಮಕ್ಕಳಿಗೆ ವೈದ್ಯಕೀಯ ತಪಾಸಣೆಗೆ ರೂ. 20 ಸಾವಿರ, ಎಸ್ಕಾರ್ಟ್ ಸೌಲಭ್ಯಕ್ಕೆ ರೂ. 1,25 ಸಾವಿರ, ಸಾರಿಗೆ ಸೌಲಭ್ಯಕ್ಕೆ ರೂ. 1,75 ಸಾವಿರ, ಕರೆಕ್ಟ್ರೂ ಸರ್ಜರಿಗೆ ರೂ. 24 ಸಾವಿರ, ಫಿಸಿಯೋಥೆರಪಿಗೆ ರೂ. 50ಸಾವಿರ, ಸಾಹಸ ಮತ್ತು ಪೃಕೃತಿ ಅಧ್ಯಯನ ಪ್ರವಾಸಕ್ಕೆ ರೂ. 30 ಸಾವಿರ, ವಿಶ್ವ ಅಂಗವಿಕಲ ದಿನಾಚರಣೆಗೆ ರೂ. ರೂ. 4,54 ಸಾವಿರ ಬಿಡುಗೆಯಾಗಿದ್ದು, ಫಲಾನುಭವಿ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಸರ್ವ ಶಿಕ್ಷಣ ಅಭಿಯಾನದ ವಿಶೇಷ ಕಾರ್ಯಕ್ರಮಗಳಾದ ಜನಪದ ಮಾಧ್ಯಮ, ಮೇಳಗಳು, ಪ್ರಚಾರ ಸಾಮಾಗ್ರಿ, ಶಿಕ್ಷಣ ಹಕ್ಕು ಕಾಯಿದೆ ಜಾಗೃತಿ, ಸ್ಪರ್ಧಾ ಮಾಸಾಚರಣೆ ಮುಂತಾದ ಕಾರ್ಯಕ್ರಮಗಳಿಗೆ ರೂ. 1,50,950 ಅನುದಾನ ಬಿಡುಗಡೆಯಾಗಿದ್ದು, ಇದನ್ನು ಇಲಾಖೆಯ ನಿಯಮಾನುಸಾರ ವಿನಿಯೋಗಿಸಲಾಗಿದೆ. 752 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಭಾರ ಸಮನ್ವಯಾಧಿಕಾರಿ ಪ್ರದೀಪ್ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ನೋಡಲ್ ಅಧಿಕಾರಿ ದಿನೇಶ್ ಮಾಚಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News