​ಬೆಳುವಾಯಿಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಆರಂಭ

Update: 2016-04-15 12:22 GMT

  ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ (ರಿ) ಬೆಳುವಾಯಿ ಇದರ ಆಶ್ರಯದಲ್ಲಿ ಬೆಳುವಾಯಿ ದುರ್ಗಾಬೆಟ್ಟು ಅಂಜಾನಶ್ರೀ ಯ ಯಕ್ಷಕುಠೀರದಲ್ಲಿ ನಾಟ್ಯ ತರಬೇತಿಯನ್ನು ತೆಂಕುತಿಟ್ಟು ಯಕ್ಷಗಾನದ ಹಿರಿಯ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯರಿಂದ ಉದ್ಘಾಟಿಸಲ್ಪಟ್ಟು, ಹೊಸನಗರ ಮೇಳದ ಭಾಗವತ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರಿಂದ ಗಣಪತಿ ಸ್ತುತಿಯೊಂದಿಗೆ ನೆರವೇರಿತು, ಆಸಕ್ತ 6 ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಶಿಬಿರದಲ್ಲಿ ನಾಟ್ಯ ತರಬೇತಿ ನೀಡಿ ರಂಗ ಪ್ರವೇಶಕ್ಕೆ ಅಣಿಗೊಳಿಸುವ ಈ ಆಶಯವನ್ನು ಶ್ರೀಯಕ್ಷದೇವ ದ ಸ್ಥಾಪಕಾಧ್ಯಕ್ಷ ನಾಟ್ಯಗುರು ಶ್ರೀ ದೇವನಂದ ಭಟ್ ವ್ಯಕ್ತಪಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀ ರವಿಪ್ರಸಾದ್ ಶೆಟ್ಟಿ ಮೂಡಬಿದಿರೆ ಸಂಯೋಜಿಸಿ, ಶ್ರೀ ರಮೇಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು, ಬಳಿಕ ಮಕ್ಕಳಿಗೆ ನಾಟ್ಯ ತರಬೇತಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News