. ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿಯಾಗಬೇಕು: ಅಬ್ದುಲ್ಲತೀಫ್

Update: 2016-04-16 18:20 GMT


ಪುತ್ತೂರು, ಎ.16: ಸಾಮಾಜಿಕ ನ್ಯಾಯ ಬಯಸುವವರು ಅಧಿ ಕಾರದಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿಯಾಗಬೇಕು. ಸಾಮಾಜಿಕ ನ್ಯಾಯ ಅಗತ್ಯವಿಲ್ಲದವರ ಕೈಯಲ್ಲಿ ಇಂದು ಅಧಿಕಾರವಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಹೇಳಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆಯಂದು ಎಸ್‌ಡಿಪಿಐ ವತಿಯಿಂದ ಪುತ್ತೂರಿನ ಕಿಲ್ಲೆ ಮೈದಾನದ ಬಳಿಯ ಚಿಣ್ಣರ ಪಾರ್ಕ್ ನಲ್ಲಿ ನಡೆದ ’ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಎಂ.ಕೂಸಪ್ಪ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಆನಂದ ಮಿತ್ತಬೈಲು ಮಾತನಾಡಿದರು. ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಪಿಎಫ್‌ಐ ಜಿಲ್ಲಾಧ್ಯಕ್ಷ ಸಂಶುದ್ದೀನ್ ಈಶ್ವರಮಂಗಲ, ಎಸ್‌ಡಿಪಿಐ ಮಹಿಳಾ ಘಟಕದ ಅಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಉಪಾಧ್ಯಕ್ಷೆ ಯಶೋದಾ ಆಲಂತಾಯ, ಸವಣೂರು ಗ್ರಾಪಂ ಸದಸ್ಯೆ ಮೀನಾಕ್ಷಿ ಬಂಬಿಲ, ಎಸ್‌ಡಿಪಿಐಯ ಮುನೀಬ್ ಬೆಂಗೈ, ಬೆಳ್ತಂಗಡಿ ಘಟಕದ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಸಮಿತಿ ಸದಸ್ಯ ಜಾಬೀರ್ ಅರಿಯಡ್ಕ, ಶಾಕಿರ್ ಅಳಕೆಮಜಲು, ದಸಂಸ ಸಂಘಟನಾ ಸಂಚಾಲಕ ಹರೀಶ್ ಅಂಕಜಾಲು, ದಲಿತ ಹೋರಾಟಗಾರ ಎನ್.ಪೊಡಿಯ ನೆಲ್ಯಾಡಿ, ಎಸ್‌ಡಿಪಿಐ ಕಾರ್ಯದರ್ಶಿ ಹಮೀದ್ ಮೆಜೆಸ್ಟಿಕ್, ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷ ಇಬ್ರಾಹೀಂ ಸಾಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬೂಬಕರ್ ಸಿದ್ದಿಕ್ ಸ್ವಾಗತಿಸಿ, ಜಾಬೀರ್ ಅರಿಯಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News