ಕ್ರೈಸ್ಟ್‌ಕಿಂಗ್ ರಜತ ಮಹೋತ್ಸವ ಸಮಾರೋಪ

Update: 2016-04-16 18:25 GMT


 ಕಾರ್ಕಳ, ಎ.16: ಸತ್ಯ ಮತ್ತು ಪ್ರಾಮಾ ಣಿಕತೆಯ ಬದುಕು, ಹಾಗೂ ಶಿಸ್ತು ಸಂಯಮ ಮೈಗೂಡಿಸಿಕೊಳ್ಳುವ ಜೊತೆಗೆ ಒಬ್ಬ ಉತ್ತಮ ನಾಗರಿಕರನ್ನಾಗಿಸುವಲ್ಲಿ ಶಿಕ್ಷಣದ ಪಾತ್ರ ಅನನ್ಯ ಎಂದು ಸಂಸದ ಡಾ.ಎಂ.ವೀರಪ್ಪಮೊಯ್ಲಿ ಹೇಳಿದ್ದಾರೆ. ಇಲ್ಲಿನ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಮ್ಯಾನೇಜಿಂಗ್ ಟ್ರಸ್ಟಿ ಹರ್ಷೇಂದ್ರ ಜೈನ್ ಮಾತನಾಡಿದರು.
ಉಡುಪಿ ಬಿಷಪ್ ಡಾ.ಐಸಾಕ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಕ್ರೈಸ್ಟ್‌ಕಿಂಗ್ ಚರ್ಚ್‌ನ ಧರ್ಮಗುರು ರೆ.ಫಾ.ಜೊಸ್ವಿ ಫೆರ್ನಾಂಡಿಸ್, ಉದ್ಯಮಿಗಳಾದ ರೊನಾಲ್ಡ್ ಕೊಲಾಸೊ ದುಬೈ, ರಿಚಾರ್ಡ್ ಲೋಬೊ ಲಂಡನ್, ಕ್ರೈಸ್ಟ್‌ಕಿಂಗ್ ಟ್ರಸ್ಟ್‌ನ ಕಾರ್ಯದರ್ಶಿ ಅವೆಲಿನ್ ಆರ್. ಲೂಯಿಸ್, ಸದಸ್ಯರಾದ ವಾಲ್ಟರ್ ಡಿಸೋಜ, ಪೀಟರ್ ಫೆರ್ನಾಂಡಿಸ್, ಲೂಸಿ ಡಿಲೀಮಾ, ಪ್ರಾಂಶುಪಾಲ ನಾರಾಯಣ ಶೇಡಿಕಜೆ, ಪುರಸಭೆ ಸದಸ್ಯ ಅಕ್ಷಯ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜೋನ್ ಸುದರ್ಶನ್, ರಿಚಾರ್ಡ್ ಮಿರಾಂಡ ಸಿಸ್ಟರ್ ಮೆಡೋನಾ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಸಂಸ್ಥೆಯ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಪೀಟರ್ ಫೆರ್ನಾಂಡಿಸ್ ಸ್ವಾಗತಿ ಸಿದರು. ಉಮೇಶ್ ಬೆಳ್ಳಿಪ್ಪಾಡಿ ಮತ್ತು ಅಲೆನ್ ಅತ್ತೂರು ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಶೇಡಿಕಜೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News