ಇಂದಿನ ಕಾರ್ಯಕ್ರಮ

Update: 2016-04-16 18:45 GMT

ಕಾರ್ಯಾಗಾರ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಬೆಳ್ಳಿಹಬ್ಬದ ಆಚರಣೆಯ ಅಂಗವಾಗಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವುಗಳ ಸಹಯೋಗದೊಂದಿಗೆ ದ್ವಿದಳ ಧಾನ್ಯ ಮತ್ತು ತರಕಾರಿ ಬೆಳೆಗಳ ಕಾರ್ಯಾಗಾರ. ಸಮಯ: ಬೆಳಗ್ಗೆ 10ರಿಂದ. ಸ್ಥಳ: ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ.

ಕ್ರೈಸ್ತರಿಗೆ ಮಾಹಿತಿ ಕಾರ್ಯಾಗಾರ: ಕ್ರೈಸ್ತ ಅಲ್ಪಸಂಖ್ಯಾತರಿಗೆ ಸರಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಲು ಮಾಹಿತಿ ಕಾರ್ಯಾಗಾರ. ಸಮಯ: ಅಪರಾಹ್ನ 3ಕ್ಕೆ. ಸ್ಥಳ:ಶೋಕಮಾತಾ ಇಗರ್ಜಿಯ ಡಾನ್‌ಬಾಸ್ಕೊ ಸಭಾಂಗಣ, ಉಡುಪಿ.

ಪ್ರವಚನ ಸಪ್ತಾಹ: ಪರ್ಯಾಯ ಶ್ರೀಪೇಜಾವರ ಮಠದ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ರಿಂದ ‘ಶ್ರೀರಾಮನ ವ್ಯಕ್ತಿತ್ವ’ ವಿಷಯದ ಕುರಿತು ವಿಶೇಷ ಪ್ರವಚನ ಸಪ್ತಾಹ. ಸಮಯ: ಸಂಜೆ 5:45ರಿಂದ 6:45ರವರೆಗೆ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ.

ಪೇಜಾವರ ಶ್ರೀ ಪಂಚಮ ಪರ್ಯಾಯದಲ್ಲಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಪರಾಹ್ನ 2:30ರಿಂದ ರಾಜಾಂಗಣದಲ್ಲಿ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ‘ವಾಲಿ ವಧೆ’, ಸಂಜೆ 5ಕ್ಕೆ ಚಂದ್ರಶಾಲೆಯಲ್ಲಿ ಪುರಾಣ, 5:45ಕ್ಕೆ ರಾಜಾಂಗಣದಲ್ಲಿ ಬನ್ನಂಜೆ ಗೋವಿಂದಾಚಾರ್ಯರಿಂದ ಧಾರ್ಮಿಕ ಉಪನ್ಯಾಸ, ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ, 7ಕ್ಕೆ ರಾಜಾಂಗಣದಲ್ಲಿ ಶಿರಸಿಯ ರೇಖಾ ದಿನೇಶ್‌ರಿಂದ ಹಿಂದೂಸ್ತಾನಿ ಸಂಗೀತ, .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News