ಅನುಚಿತ ವರ್ತನೆ : ವ್ಯಕ್ತಿ ಪೊಲೀಸ್ ವಶ

Update: 2016-04-17 12:28 GMT

ಸುಳ್ಯ: ಸುಳ್ಯದಿಂದ ಕಲ್ಲುಗುಂಡಿಗೆ ಹೋಗುತ್ತಿದ್ದ ಸರ್ವಿಸ್ ವ್ಯಾನ್‌ನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಸುಳ್ಯದಿಂದ ಕಲ್ಲುಗುಂಡಿಗೆ ಹೋಗುತ್ತಿದ್ದ ಸರ್ವಿಸ್ ವ್ಯಾನ್‌ನಲ್ಲಿ ಅನ್ಯ ಧರ್ಮದ ಮಹಿಳೆಯೊಂದಿಗೆ ಕಲ್ಲುಗುಂಡಿಯ ಫಕ್ರುದ್ದೀನ್ ಎಂಬವರು ಅನುಚಿತವಾಗಿ ವರ್ತಿಸಿ ಆಕೆಯೊಂದಿಗೆ ಮೊಬೈಲ್ ನಂಬರ್ ಕೇಳಿದರೆನ್ನಲಾಗಿದೆ. ಇದನ್ನು ಆ ಮಹಿಳೆ ಮನೆಯವರೊಂದಿಗೆ ತಿಳಿಸಿದಾಗ ಮನೆಯವರು ಸ್ಥಳೀಯರ ಸಹಕಾರದೊಂದಿಗೆ ಫಕ್ರುದ್ದೀನ್‌ರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News