ದುಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೈಯದ್ ಖಲೀಲುರ್ರೆಹಮಾನ್ ಸಾಹೇಬ್ ಇವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿತು

Update: 2016-04-17 16:52 GMT

ಭಟ್ಕಳ: ಕಳೆದ ಹಲವಾರು ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಾ, ವಿದೇಶದಲ್ಲಿಯೂ ಕೂಡಾ ಅನೇಕ ಉತ್ತಮ ಸೇವೆ ಸಲ್ಲಿಸಿ ಹೆಸರು ಪಡೆದಿರುವ ಭಟ್ಕಳದ ಅನಿವಾಸಿ ಉಧ್ಯಮಿ ಉಧ್ಯಮಿ, ಸಮಾಜ ಸೇವಕ, ಸದಾ ಸಾಮಾಜಿಕ ಚಿಂತನೆಯೊಂದಿಗೆ ಮುಂದಡಿಯಿಡುವ ಅಪ್ರತಿಮ ಪ್ರತಿಭೆ ಸೈಯದ್ ಖಲೀಲುರ್ರೆಹಮಾನ್ ಸಾಹೇಬ್ ಇವರನ್ನು ದುಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐರ್ಲೆಂಡಿನ ಅಲ್ಡರ್ಸ್ಗೆಗೇಟ್ ಕಾಲೇಜು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು.

ದುಬೈನ ಅಟ್ಲಾಂಟಿಸ್ ಹೋಟೆಲ್‌ನಲ್ಲಿ ನಡೆದ ಸಮಾಂಭದಲ್ಲಿ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಇವರ ಹೆಸರನ್ನು ಶಾರ್ಜಾದ ಹಾಲಿ ಮೆನೇಜ್‌ಮೆಂಟ್ ಕನ್ಸಲ್ಟೆನ್ಸಿ ಮತ್ತು ಇಂಡಿಯಾ ಟ್ರೇಡ್ ಎಂಡ್ ಎಕ್ಸಿಬಿಷನ್ ಸೆಂಟರ್ ಸಂಸ್ಥೆಗಳು ಶಿಫಾರಸು ಮಾಡಿದ್ದನ್ನು ಅನುಸರಿಸಿ ಐರ್ಲೆಂಡಿನ ಅಲ್ಡರ್ಸ್ಗೆಟ್ ಕಾಲೇಜು ಗೌರವ ಡಾಕ್ಟೇಟ್ ಪದವಿ ನೀಡಲು ನಿರ್ಧರಿಸಿತ್ತು.

ಗೌರವ ಡಾಕ್ಟರೇಟ್ ಪದವಿ ಸಮಾರಂಭದಲ್ಲಿ ಆಲ್ಡರ್ಸ್ಗೆಗೇಟ್ ಕಾಲೇಜಿನ ಪ್ರಾಂಶುಪಾಲ ನೀಲ್ ಥಾಮ್‌ಸನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News