ಮಂಗಳೂರು : ನಂತೂರು-ಕದ್ರಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

Update: 2016-04-18 14:13 GMT

ಮಂಗಳೂರು, ಎ. 18: ನೂತನವಾಗಿ ಕಾಂಕ್ರಿಟೀಕರಣಗೊಂಡ ನಂತೂರು-ಕದ್ರಿ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ವಿವಿಧ ರಸ್ತೆಗಳ ಕಾಂಕ್ರಿಟೀಕರಣ ಕಾಮಗಾರಿಯು ಮುಖ್ಯಮಂತ್ರಿಯವರ ವಿಶೇಷ ಅನುದಾನದಿಂದ ನಡೆಯುತ್ತಿದ್ದು, ಪಾಲಿಕೆ ವ್ಯಾಪ್ತಿಯ 350 ಮೀಟರ್‌ನ ನಂತೂರು-ಕದ್ರಿ ಕಾಂಕ್ರೀಟ್ ರಸ್ತೆಯನ್ನು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರಸ್ತೆಯು ನಂದಿಗುಡ್ಡದವರೆಗೆ ವಿಸ್ತರಣೆಗೊಳ್ಳಲಿದ್ದು, ಚರಂಡಿ ಹಾಗೂ ಫುಟ್‌ಪಾತ್ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದರು.

ಶಾಸಕ ಜೆ.ಆರ್.ಲೊಬೊ ಮಾತನಾಡಿ, ಸುಮಾರು 3 ಕೋಟಿ ರೂ. ವೆಚ್ಚದ ಈ ಕಾಂಕ್ರಿಟ್ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಫುಟ್‌ಪಾತ್ ಮತ್ತು ಚರಂಡಿ ಕಾಮಗಾರಿ ಆರಂಭಗೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಹರಿನಾಥ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ಲ್ಯಾನ್ಸ್‌ಲಾಟ್ ಪಿಂಟೊ, ಆಶಾ ಡಿಸಿಲ್ವ, ನವೀನ್ ಡಿಸೋಜ, ಅಶೋಕ್ ಡಿ.ಕೆ., ವಿನಯ್ ರಾಜ್, ಪ್ರಕಾಶ್ ಅಳಪೆ, ಸಬಿತಾ ಮಿಸ್ಕಿತ್, ದೀಪಕ್ ಪೂಜಾರಿ, ಕಮಿಷನರ್ ಗೋಪಾಲಕೃಷ್ಣ, ಎಂಜಿನಿಯರ್ ಶಿವಶಂಕರ ಸ್ವಾಮಿ, ಲಿಂಗೇಗೌಡ, ಯಶವಂತ, ಗಣಪತಿ, ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ದಿನೇಶ್ ಆಳ್ವ, ರಮಾನಂದ ಪೂಜಾರಿ, ಡೆನಿಸ್ ಡಿಸಿಲ್ವ, ಸ್ಟಾನಿ ಅಲ್ವಾರಿಸ್, ಅರುಣ್ ಕೊಲೊ, ನೆಲ್ಸನ್ ಮೊಂತೆರೊ, ಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ರಾಡ್ರಿಗಸ್, ಸುರೇಶ್ ಶೆಟ್ಟಿ, ಡೆಂಝಿಲ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News