ಮಂಗಳೂರು : ಕಾರಿನೊಳಗೆ ಸ್ಫೋಟದ ಸದ್ದು: ದೂರು

Update: 2016-04-18 17:08 GMT

ಮಂಗಳೂರು, ಎ. 18: ಕಾರನ್ನು ಪಾರ್ಕ್ ಮಾಡಿ ಇಳಿಯುತ್ತಿದ್ದ ಸಂದರ್ಭದಲ್ಲಿ ಸ್ಫೋಟದ ಸದ್ದು ಕಾಣಿಸಿಕೊಂಡು ಕಾರಿನ ಮುಂಭಾಗ ಜಖಂಗೊಂಡಿರುವ ಘಟನೆ ಇಂದು ಸಂಜೆ ಕದ್ರಿ ಪಾರ್ಕ್ ಬಳಿ ನಡೆದಿದೆ.

ಅಶೋಕ್‌ನಗರದ ನಿವಾಸಿ ಮ್ಯಾಕ್ಸ್‌ವೆಲ್ ಎಂಬವರು ಇಂದು ಸಂಜೆ ತನ್ನ ಸ್ವಿಫ್ಟ್ ಕಾರನ್ನು ಕದ್ರಿ ಪಾರ್ಕ್ ಬಳಿ ಪಾರ್ಕ್ ಮಾಡಲೆಂದು ನಿಲ್ಲಿಸಿದ್ದರು. ಕಾರನ್ನು ಲಾಕ್ ಮಾಡಿ ಕಾರಿನಿಂದ ಇಳಿಯುತ್ತಿದ್ದ ಸಂದರ್ಭದಲ್ಲಿ ಹಠಾತಾಗಿ ಸದ್ದು ಕೇಳಿ ಬಂದಿತ್ತು. ಹತ್ತಿರ ಹೋಗಿ ನೋಡಿದಾಗ ಕಾರಿನ ಮುಂಭಾಗ ಜಖಂಗೊಂಡಿದೆ. ಈ ಬಗ್ಗೆ ಮಾಕ್ಸ್‌ವೆಲ್ ಅವರು ಕದ್ರಿ ಈಸ್ಟ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News