ಮಂಗಳೂರು : ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಸರಕಾರಗಳ ನಿರ್ಲಕ್ಷ್ಯ: ವಸಂತ ಆಚಾರಿ

Update: 2016-04-18 17:09 GMT

ಮಂಗಳೂರು, ಎ. 18: ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಸರಕಾರಗಳ ಮುಂದೆ ಬೇಡಿಕೆಯಾಗಿ ಸಲ್ಲಿಸುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಬಗ್ಗೆ ತೀರಾ ನಿರ್ಲಕ್ಷ್ಯ ತೋರಿಸುತ್ತಿವೆ ಎಂದು ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಆರೋಪಿಸಿದ್ದಾರೆ.
ಅವರು ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದು ಸಿಐಟಿಯು ವತಿಯಿಂದ ಬೇಡಿಕೆಗಳಿಗಾಗಿ ಆಗ್ರಹಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
 ಕರ್ನಾಟಕ ರಾಜ್ಯ ಸರಕಾರದ ಕಾರ್ಮಿಕ ಸಚಿವರಲ್ಲಿ ರಾಜ್ಯದ ಕಾರ್ಮಿಕ ಸಂಘಟನೆಗಳು ಕನಿಷ್ಟ ಕೂಲಿ, ಬೀಡಿ ಕಾರ್ಮಿಕರ ಬಾಕಿ ತುಟ್ಟಿಭತ್ತೆ ಇತ್ಯಾದಿ ಪ್ರಶ್ನೆಗಳ ಬಗ್ಗೆ ಚರ್ಚಿಸಿದಾಗ, ಎಪ್ರಿಲ್ 12ರಂದು ಮುಖ್ಯಮಂತ್ರಿಯವರೊಡನೆ ಚರ್ಚಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಆದರೆ ನಿರ್ದಿಷ್ಟ ದಿನಾಂಕ ಎದುರಾದಾಗ, ಮುಖ್ಯಮಂತ್ರಿಗಳಿಗೆ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲು ಬಿಡುವು ಇಲ್ಲದಾಗಿದೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರದ ಇರುವ ಇಂಥ ನಿರ್ಲಕ್ಷ್ಯದ ನಿಲುವು ಖಂಡನೀಯ ಎಂದರು.
ಕೇಂದ್ರ ಸರಕಾರ ಕೋಟ್ಪಾ ಕಾಮಿದೆಯನ್ನು ಜಾರಿ ಮಾಡುವ ಮೂಲಕ ಲಕ್ಷಾಂತರ ಬೀಡಿ ಕಾರ್ಮಿಕರ ಜೀವನಾಧಾರವನ್ನು ಇಲ್ಲವಾಗಿಸಿದೆ. ಪರ್ಯಾಯ ಉದ್ಯೋಗವನ್ನು ಕಲ್ಪಿಸಿಕೊಟ್ಟಿಲ್ಲ. ಬೀಡಿ ಮಾಲಕರೂ ಈಗಾಗಲೇ ಬೀಡಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ, ಕಾುದೆ ಜಾರಿಯನ್ನು ತಡೆಹಿಡಿಯಲು ಆಗ್ರಹಿಸಿದರು.
ಸರಕಾರ 6 ಕೆಲಸಗಳಿಗೆ ಸಂಬಂಧಿಸಿದ ರ್ಕಾುಕರಿಗೆ 2012ರಿಂದ ಕನಿಷ್ಠ ವೇತನ ರೂ. 10,010/- ನಿಗದಿಗೊಳಿಸಿದೆ. ಆದರೆ ರೂ. 15,000/- ಕನಿಷ್ಟ ವೇತನ ನಿಗದಿಗೊಳಿಸಬೇಕೆಂಬುದು ಕಾರ್ಮಿಕರ ಬೇಡಿಕೆಯಾಗಿತ್ತು. ಸರಕಾರ ನಿಗದಿಗೊಳಿಸಿದ ವೇತನವನ್ನು ಜಾರಿಮಾಡದೆ ಮಾಲಕರು ಕೋರ್ಟಿನ ಮೊರೆ ಹೊಕ್ಕಿದ್ದಾರೆ. ಸರಕಾರ ಕನಿಷ್ಠ ಕೂಲಿ ಬಗ್ಗೆ ದೃಢ ನಿಲುವು ಹೊಂದಿಲ್ಲ ಎಂದು ಟೀಕಿಸಿದರು. ಇವತ್ತು ಹಮಾಲಿ, ಕಟ್ಟಡ ಕಾರ್ಮಿಕರು, ಆಶಾ, ಅಂಗನವಾಡಿ, ಬಿಸಿಯೂಟ ಇತ್ಯಾದಿ ಸ್ಕೀಮ್ ಕಾರ್ಮಿಕರು ಇವರೆಲ್ಲರ ಪ್ರಶ್ನೆಗಳ ಬಗ್ಗೆ ಕನಿಷ್ಠ ಗಮನವನ್ನು ಕೊಡುತಿತಿಲ್ಲ ಎಂದವರು ಟೀಕಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ಬಾಬು ದೇವಾಡಿಗ, ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ, ಭಾರತಿ ಬೋಳಾರ್, ಗಿರಿಜಾ ಮೂಡಬಿದಿರೆ, ಬಾಬು ಪಿಲಾರ್, ಪ್ರೇಮನಾಥ್ ಜಲ್ಲಿಗುಡ್ಡೆ, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ನಾಗೇಶ್ ಕೋಟ್ಯಾನ್, ಉಮಾಶಂಕರ್ ಬೋಳೂರು, ರಾಧಾ ಮೂಡಬಿದಿರೆ, ಭವ್ಯಾ ಮುಚ್ಚೂರು ಮೊದಲಾದವರು ಉಪಸ್ಥಿತರಿದ್ದರು.
ಜಯಂತಿ ಬಿ. ಶೆಟ್ಟಿ ಸ್ವಾಗತಿಸಿ, ಜಯಂತ ನಾಯ್ಕಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News