ನಾಳೆ ಗ್ರಾಪಂ ಚುನಾವಣೆ ಮತ ಎಣಿಕೆ

Update: 2016-04-18 18:39 GMT

ಉಡುಪಿ, ಎ.18: ಜಿಲ್ಲೆಯ 21 ಗ್ರಾಪಂಗಳ 28 ಸ್ಥಾನಗಳಿಗೆ ರವಿವಾರ ನಡೆದ ಚುನಾವಣೆಯ ಮತಗಳ ಎಣಿಕೆ ಎ.20ರಂದು ನಡೆಯಲಿದ್ದು, 3 ತಾಲೂಕು ಕೇಂದ್ರಗಳಲ್ಲಿ ಇದಕ್ಕೆ ವ್ಯಾಪಕ ಸಿದ್ಧತೆ ಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ತಿಳಿಸಿದ್ದಾರೆ.
ಉಡುಪಿಯ ತಾಲೂಕು ಕಚೇರಿಯ ಕೋರ್ಟ್ ಹಾಲ್, ಕುಂದಾಪುರದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿ ಹಾಗೂ ಕಾರ್ಕಳ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಗಳಲ್ಲಿ ಬೆಳಗ್ಗೆ 8ರಿಂದ ಮತಗಳ ಎಣಿಕೆ ಆರಂಭಗೊಳ್ಳಲಿವೆ.
ಮತಗಳ ಎಣಿಕೆಗೆ ಉಡುಪಿಯಲ್ಲಿ ನಾಲ್ಕು ಮೇಜುಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಒಬ್ಬ ಮೇಲ್ವಿಚಾರಕ, ಇಬ್ಬರು ಸಹಾಯಕರು ಹಾಗೂ 12 ಮಂದಿ ಸಿಬ್ಬಂದಿಯಿರುವರು. ಕುಂದಾಪುರದಲ್ಲಿ 3 ಮೇಜು, ಒಬ್ಬ ಮೇಲ್ವಿಚಾರಕ, 2 ಸಹಾಯಕರು, 9 ಮಂದಿ ಸಿಬ್ಬಂದಿ ಕಾರ್ಕಳದಲ್ಲಿ 1-1-2-3 ಇದ್ದು ಎಲ್ಲ ್ಲಕಡೆ ತಲಾ ಮೂವರು ಮೀಸಲು ಸಿಬ್ಬಂದಿಯಿರುವರು.
ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್ ಭದ್ರತೆ ಇದ್ದು, ಗುರುತಿನ ಚೀಟಿ ಇಲ್ಲದೆ ಯಾರಿಗೂ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಕೇಂದ್ರದಲ್ಲಿ ಮೊಬೈಲ್, ಕ್ಯಾಮೆರಾ ಇತರ ಉಪಕರಣಗಳನ್ನು ಒಯ್ಯಲು ಅವಕಾಶವಿರುವುದಿಲ್ಲ.
ಕಾಪುವಿನಲ್ಲಿ ಪಾನ ನಿರೋಧ ದಿನ: ಕಾಪು ಪುರಭೆಗೆ ಎ.24 ರಂದು ಮೊದಲ ಬಾರಿ ನಡೆಯುವ ಚುನಾವಣೆಗೆ ಸಂಬಂಧಿ ಸಿದಂತೆ ಎ.23ರ ಬೆಳಗ್ಗೆ 7ರಿಂದ 24ರ ಮಧ್ಯರಾತ್ರಿ 12ರವರೆಗೆ ಮದ್ಯಪಾನ ನಿಷೇಧ ವಿಧಿಸಲಾಗಿದ್ದು, ಪಾನ ನಿರೋಧ ದಿನವಾಗಿ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News