ತೆಕ್ಕಿಲ್ ಶಾಲೆಯ ದಶಮನೋತ್ಸವದ “ದಶ ಸಂಭ್ರಮ”

Update: 2016-04-19 11:09 GMT

 ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನ(ರಿ.) ಅರಂತೋಡು, ಇದರ ಪ್ರಾಯೋಜಕತ್ವದಲ್ಲಿ ತೆಕ್ಕಿಲ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಂಗ್ಲ ಮಾದ್ಯಮ ಪ್ರೌಡಶಾಲೆ ಗೂನಡ್ಕ ಇದರ ದಶಮಾನೋತ್ಸವ ಸಮಾರಂಭವು ದಿನಾಂಕ 23.04.2016 ನೇ ಶನಿವಾರ ಮತ್ತು ದಿನಾಂಕ 24.04.2016 ನೇ ಆದಿತ್ಯವಾರ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಶಾಲಾ ಸ್ಥಾಪಕಾಧ್ಯಕ್ಷರಾದ ಟಿ.ಎಂ. ಶಹೀದ್ ರವರು ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು..

          ದಿನಾಂಕ 23.04.2016 ರಂದು ನಡೆಯುವ ದಶಮನೋತ್ಸವದ “ದಶ ಸಂಭ್ರಮ” ದ  ಉದ್ಘಾಟನೆಯನ್ನು ರೇಷ್ಮೆ ಮತ್ತು ಪಶು  ಸಂಗೋಪನಾ ಸಚಿವರಾದ  ಸನ್ಮಾನ್ಯ ಶ್ರೀ ಎ. ಮಂಜು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು,ಮಾನ್ಯ ಶಾಸಕರಾದ ಸನ್ಮಾನ್ಯ ಶ್ರೀ ಅಂಗಾರ ವಹಿಸಲಿದ್ದಾರೆ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಟಿ. ಶ್ಯಾಮ್ ಭಟ್ ರವರು ತರಗತಿ ಕೋಣೆ ಉದ್ಘಾಡಿಸಲಿದ್ದಾರೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಹರೀಶ್ ಕಂಜಿಪಿಲಿ ಯವರು ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ,  ಪ್ರಧಾನ ಭಾಷಣಕಾರರಾಗಿ ನಿವೃತ್ತ ಪ್ರಾಂಶುಪಾಲಪಾದ ಡಾI ಯಶೋಧ ರಾಮಚಂದ್ರ, ಹಾಗೂ ಅತಿಥಿಗಳಾಗಿ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರಾದ ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ, ಎ.ಜಿ ವೆಂಕಟರಮಣ, ಜಿ.ಕೆ ಹಮೀದ್  ಭಾಗವಹಿಸಲಿದ್ದಾರೆ.
               ಸಂಜೆ  4.30 ಕ್ಕೆ “ದಶ ಸನ್ಮಾನ” ಕಾರ್ಯಕ್ರಮವನ್ನು ಮಂಗಳೂರು ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ.  ಸ್ಮರಣ ಸಂಚಿಕೆ ಬಿಡುಗಡೆಯನ್ನು  ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ ಜಿರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಶ್ರೀ ಪಿ.ಬಿ. ದಿವಾಕರ ರೈ ಪೆರಾಜೆ ನೆರವೇರಿಸಲಿದ್ದಾರೆ.  ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯಶೋಧ ಕಡೆಪಾಲ ಅಧ್ಯಕ್ಷತೆ ವಹಿಸಲಿದ್ದಾರೆ,  ಸನ್ಮಾನ್ಯ ಕಾರ್ಯಕ್ರಮವನ್ನು ಯುವ ಉದ್ಯಮಿ ಶ್ರೀ ಡಿ.ವಿ ಸತೀಶ್ ಹಾಗೂ ಬಹುಮಾನ ವಿತರಣೆಯನ್ನು  ಸುದ್ದಿ ಬಿಡುಗಡೆ ಸುಳ್ಯ ಪ್ರಧಾನ ಸಂಪಾದಕರಾದ ಶ್ರೀ ಹರೀಶ್ ಬಂಟ್ವಾಳ್ ನೆರವೇರಿಸಲಿದ್ದಾತರೆ., ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಕೆ.ಟಿ ವಿಶ್ವನಾಥ, ಅರಂತೋಡು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಚಂದ್ರಶೇಖರ್ ಪೇರಾಲು ಭಾಗವಹಿಸಲಿದ್ದು ಪ್ರಧಾನ ಭಾಷಣಕಾರರಾಗಿ ಡಾ. ಉಮ್ಮರ್ ಬೀಜದಕಟ್ಟೆ ಭಾಗವಹಿಸಲಿದ್ದಾರೆ.
             ದಿನಾಂಕ 24.04.2016 ರಂದು ನಡೆಯುವ “ದಶಸಮ್ಮಿಲನ” ದ ತಾಲೂಕು ಮಟ್ಟದ ಶಿಕ್ಷಕರ, ಶಾಲಾ ಆಡಳಿತ ಮಂಡಳಿ ಹಾಗೂ ಅಭಿವೃದ್ದಿ ಸಮಿತಿಯ ಸೌಹಾರ್ದ ಸಮ್ಮಿಲನ ಕಾರ್ಯಕ್ರಮವನ್ನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರು ಹಾಗೂ ಕೊಡಗು ಜಿಲ್ಲಾ  ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಗುಂಡೂರಾವ್ ಉದ್ಘಾಟಿಸಲಿದ್ದು, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆ ಗೂನಡ್ಕ ಸ್ಥಾಪಕಾಧ್ಯಕ್ಷರಾದ ಶ್ರೀ ಟಿ.ಎಂ. ಶಹೀದ್ ಅಧ್ಯಕ್ಷತೆ ವಹಿಸಲಿದ್ದಾರೆ., ಶಿಕ್ಷಣ ಸಂಯೋಜಕರಾದ ಡಾI ಸುಂದರ ಕೇನಾಜೆ ಯವರು ಪ್ರಧಾನ ಭಾಷಣ ಮಾಡಲಿದ್ದು, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ಕುಂಚಡ್ಕ, ಹೊಟೇಲ್ ಪೂಂಜ ಇಂಟರ್ ನ್ಯಾಶ್ ನಲ್ ಮಂಗಳೂರು ವ್ಯವಸ್ಥಪಕ ನಿರ್ದೇಶಕರಾದ  ಶ್ರೀ ಪ್ರಭಾಕರ ಪೂಂಜ, ವಲಯ ಅರಣ್ಯಾಧಿಕಾರಿ ಕುಮಾರಿ ಶಮಾ, ಶ್ರೀಮತಿ ವೀಣಾ ಸತೀಶ, ನಾರಾಯಣ ನೀರಬಿದ್ರೆ, ಚಿದಾನಂದ ಯು.ಎಸ್. ಮೊದಲಾದವರು  ಭಾಗವಹಿಸಲಿದ್ದಾರೆ. ವಸಂತ ಕುಮಾರ್  ವ್ಯವಸ್ಥಾಪಕರು ವಿಜಯ ಬ್ಯಾಂಕ್ ಅರಂತೋಡು ಇವರು ಬಹುಮಾನ ವಿತರಣೆ ಮಾಡಲಿದ್ದಾರೆ.
         ಸಂಜೆ 4 ಗಂಟೆಗೆ “ದಶ ವಿಜಯ” ದ, ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಯು.ಟಿ ಖಾದರ್ ಉದ್ಘಾಟಿಸಲಿದ್ದು ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ  ಟಿ.ಎಂ ಶಹೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸನ್ಮಾನ ಕಾರ್ಯಕ್ರಮವನ್ನು ದಶಮಾನೋತ್ಸವ ಸಮಿತಿ ಹಾಗೂ ಶಿಕ್ಷಕ –ರಕ್ಷಕ ಸಂಘದ ಅಧ್ಯಕ್ಷರಾದ  ಶ್ರೀ ತೀರ್ಥರಾಮ ಯು.ಕೆ. ನೆರವೇರಿಸಲಿದ್ದು ಮಾಜಿ ರಾಜ್ಯಪಾಲರಾದ ಶ್ರೀ ಎಂ.ಬಿ. ಸದಾಶಿವ ರವರು ಪ್ರಧಾನ ಭಾಷಣ ಮಾಡಲಿದ್ದಾರೆ. ಆರ್,ಎಂ ಗ್ರೂಪ್ ಬೆಂಗಳೂರು ಛೇರ್ ಮೇನ್ ಆದ ಜನಾಬ್ ಹಾಜಿ ಅಬ್ದುಲ್ ಖಾದರ್ ಅಮ್ಚಿನಡ್ಕ, , ಶ್ರೀಮತಿ ಪುಷ್ಪಾ ಮೇದಪ್ಪ ಉಳುವಾರು, ಶ್ರೀ ಸೋಮಶೇಖರ ಕೊಯಿಗಾಜೆ, ಶ್ರೀ ಬಾಲಚಂದ್ರ ಕಳಗಿ, ಶ್ರೀಮತಿ ಆಶಾ ವಿನಯ್ ಕುಮಾರ್, ಶ್ರೀ ಕೆ.ಪಿ ಜಗದೀಶ್ ಗೂನಡ್ಕ, ಶ್ರೀ ಮಹಮ್ಮದ್ ಕುಂಞ ಗೂನಡ್ಕ ಮೊದಲಾದವರು ಭಾಗವಹಿಸಲಿದ್ದಾರೆ.

            ದಿನಾಂಕ 23.04.2016 ರಂದು ವಿಶೇಷ ಆಕರ್ಷಣೆಯಾಗಿ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಚಕ್ರಪಾಣಿ ನೃತ್ಯ ಕಲಾಕೇಂದ್ರ ಅತ್ತಾವರ ಮಂಗಳೂರು ಇವರಿಂದ “ಕೋರ್ದಬ್ಬು ತನ್ನಿ ಮಾಣಿಗ” ನೃತ್ಯ ರೂಪಕ  ಹಾಗೂ 24 ರಂದು ಭಾವ ಯೋಗ ಗಾನ ನೃತ್ಯ , ಭಾರ್ಗವಿ ನೃತ್ಯ ತಂಡ ಇವರಿಂದ ಹಾಗೂ ಶಾಲಾ ಮತ್ತು  ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ  ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ  ಮುಖ್ಯೋಪಾದ್ಯಾಯರು ಮತ್ತು ಅಧ್ಯಾಪಕರುಗಳನ್ನು ಸನ್ಮಾನಿಸಲಾಗುತ್ತದೆ. ಪತ್ರಿಕಾ ಗೋಷ್ಠಿಯಲ್ಲಿ ಶಾಲಾ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಹೀದ್ ರವರು ತಿಳಿಸಿದರು.
       ಪತ್ರಿಕಾಗೋಷ್ಠಿಯಲ್ಲಿ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಯು.ಕೆ ತೀರ್ಥರಾಮ ಉಳುವಾರು, ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಹಮ್ಮದ್ ಕುಂಞ ಕೊಯನಾಡು, ದಿನಕರ ಸಣ್ಣಮನೆ,  ಮುಖ್ಯೋಪದ್ಯಾಯರಾದ ದಾಮೋದರ ಕೆ, ತೆಕ್ಕಿಲ್ ಆಂಗ್ಲ ಮಾದ್ಯಮ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಅಧ್ಯಾಪಕಿಯರಾದ ವಾಣಿಶ್ರೀ ಮತ್ತು ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News