ವೇಣೂರು, ಆರಂಬೋಡಿ ಗ್ರಾಮ ಪಂಚಾಯತ್ನಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ

Update: 2016-04-20 13:45 GMT

ಬೆಳ್ತಂಗಡಿ: ತಾಲೂಕಿನ ವೇಣೂರು ಹಾಗೂ ಆರಂಬೋಡಿ ಗ್ರಾಮ ಪಂಚಾಯತುಗಳಿಗೆ ನಡೆದ ಚುನಾವಣೆಯಲ್ಲಿ ಎರಡೂ ಪಂಚಾಯತುಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರವನ್ನು ಪಡೆದುಕೊಂಡಿದ್ದು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಆರಂಬೋಡಿಯಲ್ಲಿ 12 ಸ್ಥಾನಗಳಿದ್ದು ಬಿಜೆಪಿ ಬೆಂಬಲಿತರು 8 ಸ್ಥಾನಗಳನ್ನು ಪಡೆದು ಅಧಿಕಾರವನ್ನು ಉಳಿಸಿಕೊಂಡರೆ ಕಾಂಗ್ರೆಸ್ ಬೆಂಬಲಿಗರು ನಾಲ್ಕು ಸ್ಥಾನಗಳನ್ನು ಗಳಿಸಿಕೊಂಡಿದ್ದಾರೆ. ವೇಣೂರು ಗ್ರಾಮ ಪಂಚಾಯತಿನಲ್ಲಿ ಒಟ್ಟು 24 ಸ್ಥಾನಗಳಿದ್ದು ಬಿಜೆಪಿ ಬೆಂಬಲಿತರು 14 ಸ್ಥಾನಗಳನ್ನು ಗಳಿಸಿಕೊಂಡು ಕಾಂಗ್ರೆಸ್ ಕೈಯಿಂದ ಅಧಿಕಾರ ಕಸಿದುಕೊಂಡಿದೆ ಕಾಂಗ್ರೆಸ್ ಬೆಂಬಲಿಗರಿಗೆ ಕೇವಲ 10 ಸ್ಥಾನಗಳು ಮಾತ್ರ ಲಭಿಸಿದೆ.

    ವೇಣೂರು ಗ್ರಾಮ ಪಂಚಾಯತ್‌ನ ವೇಣೂರು 1ನೇ ವಾರ್ಡ್‌ನಲ್ಲಿ ಕಸ್ತೂರಿ, ರಾಜೇಶ್ ಪೂಜಾರಿ, ಶಾರದಾ, ವಿಕ್ಟರ್ ಮಿನೇಜಸ್ ( ಎಲ್ಲರೂ ಕಾಂಗ್ರೇಸ್ ಬೆಂಬಲಿತರು), ವೇಣೂರು 2ನೇ ವಾರ್ಡ್‌ನಲ್ಲಿ ನೇಮಯ್ಯ ಕುಲಾಲ್ (ಬಿಜೆಪಿ), ಸಹನಾಜ್, ರೋನಾಲ್ದ್ ಡಿಸೋಜಾ (ಕಾಂಗ್ರೇಸ್), ಮೂಡುಕೋಡಿ 1ನೇ ವಾರ್ಡ್‌ನಲ್ಲಿ ರಾಜೇಶ್ ಪೂಜಾರಿ (ಬಿಜೆಪಿ), ಜೆಸ್ಸಿ ಪಿರೇರಾ (ಕಾಂಗ್ರೇಸ್), ಮೂಡುಕೋಡಿ 2ನೇ ವಾರ್ಡ್‌ನಲ್ಲಿ ಹರೀಶ್ ಪಿ.ಎಸ್., ಲಕ್ಷ್ಮಣ ಪೂಜಾರಿ, ಮೋಹಿನಿ ಶೆಟ್ಟಿ(ಬಿಜೆಪಿ), ಬಜಿರೆ 1ನೇ ವಾರ್ಡ್‌ನಲ್ಲಿ ಅರುಣ್ ಕ್ರಾಸ್ತಾ, ಲೀಲಾವತಿ, ಗಂಗಾಶೇಖರ್ (ಬಿಜೆಪಿ), ಬಜಿರೆ 2ನೇ ವಾರ್ಡ್‌ನಲ್ಲಿ ಸತೀಶ್ ಹೆಗ್ಡೆ,ವಿಶಾಲಾಕ್ಷಿ (ಕಾಂಗ್ರೆಸ್) ಹಾಗೂ ಲೋಕಯ್ಯ ಪೂಜಾರಿ (ಬಿಜೆಪಿ). ಕರಿಮಣೇಲು 1ನೇ ವಾರ್ಡ್‌ನಲ್ಲಿ ಅಣ್ಣು, ಶೋಭಾ ಯಾನೆ ನಯನ, ಶೋಭಾ ಹೆಗ್ಡೆ (ಬಿಜೆಪಿ), ಕರಿಮಣೇಲು 2ನೇ ವಾರ್ಡ್‌ನಲ್ಲಿ ಪುಷ್ಪಾ ಆನಂದ, ಯಶೋಧರ ಹೆಗ್ಡೆ( ಬಿಜೆಪಿ), ಮಾರ್ಗರೇಟ್ ಕೊರೆಂು( ಕಾಂಗ್ರೇಸ್) ಜಯಗಳಿಸಿದ್ದಾರೆ.

ಆರಂಬೋಡಿ ಗ್ರಾಮ ಪಂಚಾಯತ್12 ಸ್ಥಾನಗಳ ಪೈಕಿ ಬಿಜೆಪಿ 8 ಸ್ಥಾನಗಳನ್ನು ಗಳಿಸಿ ಅಧಿಕಾರವನ್ನು ಪಡೆದಿದೆ. 4 ಸ್ಥಾನಗಳನ್ನು ಕಾಂಗ್ರೇಸ್ ಗೆದ್ದುಕೊಂಡಿದೆ.
  ಆರಂಬೋಡಿ 1ನೇ ವಾರ್ಡ್‌ನಲ್ಲಿ ರೇಖಾ, ವಿಜಯ ನಾಯ್ಕ, ವಿಜಯ, ಎಚ್. ಪ್ರಭಾಕರ( ಬಿಜೆಪಿ ) ಆರಂಬೋಡಿ 2ನೇ ವಾರ್ಡ್‌ನಲ್ಲಿ ಪ್ರಭಾವತಿ, ಶಶಿಧರ, ಆಶಾ ಶೆಟ್ಟಿ, ಸತೀಶ್ ಪೂಜಾರಿ( ಬಿಜೆಪಿ) ಗುಂಡೂರಿ ಗ್ರಾಮದ 1ನೇ ವಾರ್ಡ್‌ನಲ್ಲಿ ಗೋಪಾಲ, ರಮೇಶ್ ಪೂಜಾರಿ, ಹರೀಶ್ ಕುಮಾರ್, ಭವಿತ ಯಾನೆ ಮಂಜುಳಾ(ಕಾಂಗ್ರೇಸ್ ) ಜಯಗಳಿಸಿದ್ದಾರೆ. ನಾನಾ ಕಾರಣದಿಂದ ತೆರವಾಗಿದ್ದ ತಾಲೂಕಿನ 5 ಗ್ರಾಮ ಪಂಚಾಯತ್‌ಗಳ 5 ಸ್ಥಾನಗಳಲ್ಲಿ ಬಿಜೆಪಿ ಮೂರು ಹಾಗೂ ಕಾಂಗ್ರೇಸ್ 2 ಸ್ಥಾನಗಳನ್ನು ಪಡೆದಿದೆ.

    ಉಪ ಚುನಾವಣೆ ನಡೆದ 5 ಸ್ಥಾನಗಳಲ್ಲಿ ಲಾಲ ಗ್ರಾಮ ಪಂಚಾಯತ್‌ನಲ್ಲಿ ಒಂದು ಸ್ಥಾನವನ್ನು ಬಿಜೆಪಿ ಬೆಂಬಲಿತ ಚಿದಾನಂದ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಚ್ಚಿನ ಗ್ರಾಮದ ಒಂದು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಜಾನಕಿ, ಕಲ್ಮಂಜ ಗ್ರಾಮದ ಒಂದು ಸ್ಥಾನದಲ್ಲಿ ಕಾಂಗ್ರೇಸ್ ಬೆಂಬಲಿತ ರಾಧಾಕೃಷ್ಣ ಗೌಡ, ಉರುವಾಲು ಗ್ರಾಮದ ಒಂದು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಯಶೋದಾ ಎನ್., ತೋಟತ್ತಾಡಿ ಗ್ರಾಮದ ಒಂದು ಸ್ಥಾನದಲ್ಲಿ ಕಾಂಗ್ರೇಸ್ ಬೆಂಬಲಿತ ಶೋಭಾ ಶಿಬಿ ಜಯಗಳಿಸಿದ್ದಾರೆ.


ವೇಣೂರು ಹಾಗೂ ಆರಮಬೋಡಿ ಗ್ರಾ.ಪಂಗಳ ಗೆಲುವಿನ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News