ಮನೆಗೆ ಅಕ್ರಮ ಪ್ರವೇಶಗೈದು ಜೀವ ಬೆದರಿಕೆ: ಶಿಕ್ಷಕನ ವಿರುದ್ಧ ದೂರು

Update: 2016-04-20 16:41 GMT

ಉಪ್ಪಿನಂಗಡಿ: ಮನೆಯಲ್ಲಿ ಮಗಳೊಬ್ಬಳೇ ಇದ್ದಾಗ ಶಿಕ್ಷಕನೊಬ್ಬ ಅಕ್ರಮ ಪ್ರವೇಶಗೈದು ಜೀವ ಬೆದರಿಕೆಯೊಡ್ಡಿರುವ ಕೃತ್ಯದ ಬಗ್ಗೆ ನೆಲ್ಯಾಡಿ ಗ್ರಾಮದ ಅಶ್ವತ್ತಡಿ ಮನೆ ನಿವಾಸಿ ವಿಧವೆ ಕಲಾವತಿ ಎಂಬಾಕೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ತನ್ನ ಗಂಡನ ಹೆಸರಿನಲ್ಲಿದ್ದ ಭೂಮಿಯನ್ನು ಅಕ್ರಮ ಸ್ವಾಧೀನ ಪಡಿಸಲು ರೋನಾಲ್ಡ್ ಎಂಬಾತ ಯತ್ನಿಸುತ್ತಿದ್ದು, ಈತನ ಈ ಕೃತ್ಯದ ಬಗ್ಗೆ ತಾನು ದಾಖಲಿಸಿರುವ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ, ಈತ ಇದೀಗ ತಮಗೆ ಭೀತಿ ಮೂಡಿಸುತ್ತಿದ್ದು, ನಮ್ಮನ್ನು  ಮನೆಯಿಂದ ಹೊರದಬ್ಬಲು ಯತ್ನಿಸುತ್ತಿದ್ದಾನೆ.

ಇದರೊಂದಿಗೆ  ಕಳೆದ ಎಪ್ರಿಲ್ 16 ರಿಂದ 18 ರವರೆಗೆ ಸತತವಾಗಿ ಮನೆಗೆ ಅಕ್ರಮ ಪ್ರವೇಶ ಮಾಡಿ ಬೆದರಿಸುವುದು ಹಾಗೂ ಪೋನ್ ಕರೆಯ ಮೂಲಕ ಬೆದರಿಸುವ ಕೃತ್ಯವನ್ನು ನಡೆಸುತ್ತಿರುವುದಾಗಿ ಕಲಾವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾರೆ.

ದೂರು ತಿರಸ್ಕೃತ: ಆರೋಪ

ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ ಕಲಾವತಿಯವರು, ತನ್ನ ವಶದಲ್ಲಿರುವ ಭೂಮಿಯಲ್ಲಿ ದನವನ್ನು ಕಟ್ಟಿ ಹಾಕಿದ್ದಕ್ಕೆ ವ್ಯಾಜ್ಯ ಹೊಂದಿರುವ ರೋನಾಲ್ಡ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದನ್ನು ಪೊಲೀಸರು ಸ್ವೀಕರಿಸಿದ್ದಾರೆ. ಆದರೆ ತನಗೆ ಮತ್ತು ತನ್ನ ಮಗಳು ಮನೆಯಲ್ಲಿ ಒಬ್ಬಳೇ ಇದ್ದಾಗ ಅಕ್ರಮ ಪ್ರವೇಶಗೈದು ರೋನಾಲ್ಡ್ ಬೆದರಿಕೆಯೊಡ್ಡಿದ ಪ್ರಕರಣವನ್ನು ಸುಳ್ಳು ಹೇಳುತ್ತೀರಿ ಎಂಬ ಕಾರಣವೊಡ್ಡಿ ಪೊಲೀಸರು ತಿರಸ್ಕರಿಸಿದ್ದಾರೆಂದು ಕಲಾವತಿಯವರು ಮಾಧ್ಯಮದ ಮುಂದೆ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News