ಕಲ್ಲಮುಂಡ್ಕೂರು ಸೇತುವೆಯಡಿಯಲ್ಲಿ ನವಜಾತ ಶಿಶು ಪತ್ತೆ

Update: 2016-04-21 04:43 GMT

ಮೂಡುಬಿದಿರೆ, ಎ.21: ಯಾರೋ ತೊರೆದು ಹೋದ ಸ್ಥಿತಿಯಲ್ಲಿ ನವಜಾತ ಶಿಶುವೊಂದು ಇಲ್ಲಿಗೆ ಸಮೀಪದ ಕಲ್ಲಮುಂಡ್ಕೂರಿನಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.
ಸುಮಾರು ಐದು ದಿನಗಳ ಈ ಹೆಣ್ಣು ಮಗು ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಮುಂಡ್ಕೂರು ಸಮೀಪದ ಕೈದಬೆಟ್ಟು ಎಂಬಲ್ಲಿ ಕಂಡುಬಂದಿದೆ. ಕೈದಬೆಟ್ಟು ಹಳೆನೀರು ಸೇತುವೆಯ ಅಡಿಯಲ್ಲಿ ಮಗು ಇತ್ತೆನ್ನಲಾಗಿದೆ.
ಇಂದು ಬೆಳಗ್ಗೆ ಸ್ಥಳೀಯರೊಬ್ಬರು ವಾಕಿಂಗ್ ತೆರಳಿದಾಗ ಈ ಮಗು ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಮಗುವನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News