ಕಾಸರಗೋಡು : ಮೇ 16 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆ ಗೆ 22 ಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

Update: 2016-04-21 12:00 GMT

ಕಾಸರಗೋಡು :  ಮೇ 16 ರಂದು  ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆ ಗೆ 22 ಯಿಂದ  ನಾಮಪತ್ರ  ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.  ಬೆಳಿಗ್ಗೆ  ೧೧ ರಿಂದ ಅಪರಾಹ್ನ ೩ ಗಂಟೆ ತನಕ  ಆಯಾ ವಿಧಾನಸಭಾ ಕ್ಷೇತ್ರದ  ಚುನಾವಣಾಧಿಕಾರಿಗಳಿಗೆ  ನಾಮಪತ್ರ ಸಲ್ಲಿಸಬಹುದಾಗಿದೆ.

೨೯ ರ ತನಕ ನಾಮಪತ್ರ  ಸಲ್ಲಿಸಬಹುದಾಗಿದೆ.  ೩೦ ರಂದು ಸೂಕ್ಷ್ಮ ಪರಿಶೀಲನೆ ನಡೆಯಲಿದೆ. ಮೇ ೨ ರ ತನಕ ನಾಮಪತ್ರ ಹಿಂತೆಗೆಯಬಹುದು.  ಕಾಸರಗೋಡು ಜಿಲ್ಲೆಯ ಐದು ಸೇರಿದಂತೆ ರಾಜ್ಯದ ೧೪೦ ವಿಧಾನಸಭಾ  ಕ್ಷೇತ್ರಗಳಿಗೆ ಮೇ ೧೬ ರಂದು ಚುನಾವಣೆ ನಡೆಯಲಿದ್ದು , ಮೇ ೧೯ ರಂದು ಮತ ಎಣಿಕೆ  ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News