‘ಕನ್ನಡದಲ್ಲೂ ಅಭ್ಯರ್ಥಿಗಳ ಹೆಸರು ಪ್ರಕಟ’

Update: 2016-04-21 18:08 GMT

ಕಾಸರಗೋಡು, ಎ.21: ಜಿಲ್ಲೆಯ 313 ಮತಗಟ್ಟೆಗಳಲ್ಲಿನ ಮತಯಂತ್ರಗಳಲ್ಲಿ ಕನ್ನಡದಲ್ಲೂ ಅಭ್ಯರ್ಥಿಗಳ ಹೆಸರು ನಮೂದಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಇ.ದೇವದಾಸನ್ ತಿಳಿಸಿದ್ದಾರೆ.
ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿನ ಮತಯಂತ್ರಗಳಲ್ಲಿ ಮಲಯಾಳದ ಜೊತೆ ಕನ್ನಡದಲ್ಲೂ ಹೆಸರು ನಮೂದಿಸಲಾಗುತ್ತದೆ. ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಚುನಾವಣಾ ಆಯೋಗ ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ಅಧಿಕೃತ ಭಾಷೆ ಜೊತೆಗೆ ಆಯಾ ಸ್ಥಳೀಯ ಭಾಷೆ ಯನ್ನು ಮತಪತ್ರದಲ್ಲಿ ಬಳಸಲು ಆದೇಶ ನೀಡಿತ್ತು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 167 ಮತ್ತು ಕಾಸರಗೋಡಿನಲ್ಲಿ 146 ಮತಗಟ್ಟೆ ಗಳಲ್ಲಿ ಕನ್ನಡ ಭಾಷೆ ಬಳಸಲಾಗುವುದು. *22ರಂದು ಚುನಾವಣಾ ಅಧಿಸೂಚನೆ ಪ್ರಕಟ : ಮೇ 16 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಿರುವ ಅಧಿಸೂಚನೆ ಎ.22ರಂದು ಹೊರ ಬೀಳಲಿದೆ. 22ರಿಂದ ಪೂರ್ವಾಹ್ನ 11ರಿಂದ ಅಪರಾಹ್ನ 3ರತನಕ ನಾಮಪತ್ರ ಸ್ವೀಕರಿಸಲಾಗುವುದು. *26,818 ಹೊಸ ಅರ್ಜಿಗಳು: ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಮತ ದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅವಧಿ ಕೊನೆಗೊಂಡಿದೆ. ಮಂಜೇಶ್ವರದಲ್ಲಿ 7,407, ಕಾಸರಗೋಡಿನಲ್ಲಿ 5,643, ಉದುಮದಲ್ಲಿ 6,529, ಕಾಞಂಗಾಡ್‌ನಲ್ಲಿ 3,356, ತ್ರಿಕ್ಕರಿಪುರದಲ್ಲಿ 3,538 ಮಂದಿ ಸಹಿತ ಹೆಸರು ಸೇರ್ಪಡೆಗೆ 26,818 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳನ್ನು ಎ.26ರೊಳಗೆ ಪರಿಶೀಲಿಸಿ ಅಂತಿ ಮಗೊಳಿಸಲಾಗುವುದು. ಎ.29ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಇದರಲ್ಲಿ ಹೆಸರು ಸೇರ್ಪಡೆಗೊಂಡವರಿಗೆ ಮತ ಚಲಾ ಯಿಸುವ ಅವಕಾಶ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News