ಇಂಡಿಯಾ ಫ್ರಟರ್ನಿಟಿ ಫೋರಮ್ನಿಂದ ಸ್ನೇಹಕೂಟ

Update: 2016-04-21 18:14 GMT


ರಿಯಾದ್, ಎ.21: ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ಕರ್ನಾಟಕ ಚಾಪ್ಟರ್ ವತಿಯಿಂದ ‘ಸ್ನೇಹ ಕೂಟ 2016- ಕುಟುಂಬ ಸಮ್ಮಿಲನ’ ಕಾರ್ಯಕ್ರಮವು ಇತ್ತೀಚೆಗೆ ರಿಯಾದ್‌ನ ಅಲ್ ರುಶ್ದೃ್ ರೆಸಾರ್ಟ್‌ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೋರಮ್‌ನ ಅಧ್ಯಕ್ಷ ಅಬ್ದುರ್ರವೂಫ್ ಕಲಾಯಿ ವಹಿಸಿದ್ದರು. ಸೌದಿ ಆರೋಗ್ಯ ಸಚಿವಾಲಯ ವೈದ್ಯ ಡಾ.ಕೈಸರ್ ಫರ್ವೇಝ್ ಕಾರ್ಯಕ್ರಮ ಉದ್ಘಾಟಿಸಿದರು. ಐಎಫ್‌ಎಫ್ ಜಿದ್ದಾ ಸಮಿತಿ ಸದಸ್ಯ ಅಬ್ದುಲ್ ಮಜೀದ್ ‘ಪ್ರಸಕ್ತ ಇಂಡಿಯಾ ದೇಶದ ರಾಜಕೀಯ ಸ್ಥಿತಿಗತಿ’ಗಳ ಬಗ್ಗೆ ವಿವರಿಸಿದರು. ಗೋಲ್ಡನ್ ತೆಲಂಗಾಣ ವೆಲ್ಫೇರ್ ಅಸೋಸಿಯೇಶನ್ ಮುಖ್ಯ ಪೋಷಕ ಸೈಯದ್ ಮುಜಾಮ್ ಅಲಿ ಅತಿಥಿ ಗಳಾಗಿದ್ದರು. ಇಂಡಿಯಾ ಫ್ರಟರ್ನಿಟಿ ಫೋರಮ್ ಕೇಂದ್ರ ವಲಯ ಅಧಕ್ಷ ಇಲ್ಯಾಸ್ ತಿರೂರು ಹಾಗೂ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮುಷ್ತಾಕ್ ಕಾಸಿಂ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಇನೋಳಿ ಸ್ವಾಗತಿಸಿದರು. ಮಾಸ್ಟರ್ ಆದಿಲ್ ಹುಸೈನ್ ಕಿರಾಅತ್ ಪಠಿಸಿದರು. ಮುಹಮ್ಮದ್ ಹನೀಫ್ ವಂದಿಸಿದರು. ಶರೀಫ್ ಕಬಕ ಮತ್ತು ನವೀದ್ ಕುಂದಾಪುರ ಕಾರ್ಯ ಕ್ರಮ ನಿರೂಪಿಸಿದರು.
‘ನಂಙಲೋ ಜಮಾತ್’ ಹಾಸ್ಯ ಪ್ರಹಸನವನ್ನು ಐಎಫ್‌ಎಫ್ ರಿಯಾದ್ ಘಟಕದ ಸದಸ್ಯರು ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಕ್ವಿಝ್, ಹಗ್ಗ ಜಗ್ಗಾಟ , ಮ್ಯೂಸಿಕಲ್ ಚೇರ್, ಓಟ ಮುಂತಾದ ಸ್ಫರ್ದೆಗಳನ್ನು ಏರ್ಪಡಿಸಲಾಗಿತ್ತು.
ಯುವಕರ ವಾಲಿಬಾಲ್ ಪಂದ್ಯಾಟದಲ್ಲಿ ಪುತ್ತೂರು ರೈಡರ್ಸ್ ತಂಡ ಪ್ರಥಮ ಮತ್ತು ಬಣಕಲ್ ತಂಡವು ದ್ವಿತೀಯ ಬಹುಮನ ಗಳಿಸಿತ್ತು. ಹಗ್ಗ ಜಗ್ಗಾಟದಲ್ಲಿ ಐಎಫ್‌ಎಫ್ ರಿಯಾದ್ ತಂಡವು ಪ್ರಥಮ ಮತ್ತು ಪುತ್ತೂರು ರೈಡರ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಯುವ ಉದ್ಯಮಿ ಉಸ್ಮಾನ್ ಕುಂಜತ್ತೂರ್ ಮತ್ತು ಐಎಫ್‌ಎಫ್ ಜಿಲ್ಲಾ ಸಮಿತಿ ಸದಸ್ಯ ಸಿದ್ದೀಕ್ ಮಡಿಕೇರಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News