ಉಳ್ಳಾಲಕ್ಕೆ ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು

Update: 2016-04-21 18:28 GMT

ಉಳ್ಳಾಲ, ಎ.21: ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಕೊರತೆಯ ಬಿಸಿ ಉಳ್ಳಾಲ ನಗರಸಭೆಗೆ ತಟ್ಟಿದೆ. ಇನ್ನು ಮುಂದೆ ನಗರವಾಸಿಗಳಿಗೆ ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುವುದು ಅನಿವಾರ್ಯ ಎಂದು ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿ ಮೋನು ಹೇಳಿದ್ದಾರೆ.
ಅವರು ಉಳ್ಳಾಲ ನಗರಸಭೆಯ ಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಮಹಾ ನಗರ ಪಾಲಿಕೆಯು ಉಳ್ಳಾಲ ನಗರಕ್ಕೆ ಸರಬರಾಜು ಮಾಡುವ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಿದೆ. ಮನಪಾ ಸಮರ್ಪಕವಾಗಿ ನೀರು ಪೂರೈಸಿದರೆ ಮುಂದಿನ ಒಂದೂವರೆ ತಿಂಗಳ ಕಾಲ ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಸಾಧ್ಯ ವಾಗಬಹುದು ಎಂದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಸದ್ಯ ಟ್ಯಾಂಕರ್‌ಗಳ ಮೊರೆ ಹೋಗಲಾ ಗಿದ್ದು, ದಿನವೂ 4 ವಾಹನಗಳು 13 ಟ್ರಿಪ್‌ಗಳಂತೆ ಒಟ್ಟು 52 ಬಾರಿ ನೀರು ಸರಬರಾಜು ಮಾಡುತ್ತಿವೆ ಎಂದರು.
ನಗರಸಭೆ ಉಪಾ ಧ್ಯಕ್ಷೆ ಚಿತ್ರಾಕಲಾ ಚಂದ್ರಕಾಂತ್, ಪೌರಾಯುಕ್ತೆ ರೂಪಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಫತಾಕ್ ಸುದ್ದಿಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News