ಮೂಡುಬಿದಿರೆ: ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿಗಾರ ಕಾಣೆ

Update: 2016-04-22 13:15 GMT

ಮೂಡುಬಿದಿರೆ: ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಕೊಡ್ಯಡ್ಕಕ್ಕೆ ಪ್ರವಾಸಕ್ಕೆಂದು ಬಂದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನ ಶ್ರೀ ಗುರು ಮಲ್ಲೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಹೆಚ್.ಎಂ. ಸದಾಶಿವ (39 ವ) ಕಾಣೆಯಾಗಿದ್ದಾರೆಂದು ಸಂಸ್ಥೆಯ ಜಿ.ಟಿ.ಒ. ಕೆ.ಎಂ.ಮಹದೇವಸ್ವಾಮಿ ಮೂಡುಬಿದಿರ ಪೊಲೀಸು ಠಾಣೆಗೆ ದೂರು ನೀಡಿದ್ದಾರೆ.
 ಎ.13 ರಂದು ಹೆಚ್.ಎಂ.ಸದಾಶಿವ ಸಹಿತ ಇಬ್ಬರು ತರಬೇತಿ ಅಧಿಕಾರಿಗಳು ಮತ್ತು ಶಿಕ್ಷಣಾರ್ಥಿಗಳು ಸೇರಿಕೊಂಡು ಶಿಕ್ಷಣಾರ್ಥಿಗಳ ವೆಚ್ಚದಲ್ಲಿ ಪ್ರವಾಸ ಹೊರಟಿದ್ದು; ಎ.17 ರಂದು ಕೊಡ್ಯಡ್ಕಕ್ಕೆ ಬಂದಿಳಿದಿದ್ದರು. ಬೆಳಿಗ್ಗೆ 7.15 ರಿಂದ 7.30 ಗಂಟೆಯ ಮಧ್ಯದ ಅವಧಿಯಲ್ಲಿ ಪೇಸ್ಟ್ ತರುತ್ತೇನೆಂದು ಹೇಳಿ ಹೋದ ಸದಾಶಿವ ಅವರು ವಾಪಾಸು ಬಂದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಅವರು ತನ್ನ ಮನೆಯಾದ ಮೈಸೂರಿನ ನಂಜನಗೂಡು ತಾಲೂಕಿನ ಹಂಡುವಿನ ಹಳ್ಳಿಗೂ ಹೋಗದಿರುವುದು ಗಮನಕ್ಕೆ ಬರಲಾಗಿ ಜಿ.ಟಿ.ಒ. ಪೊಲೀಸು ಠಾಣೆಗೆ ಎ.21 ರಂದು ದೂರು ನೀಡಿದ್ದರು.
ಚಹರೆ ಇಂತಿದೆ:
   ತಂದೆಯ ಹೆಸರು - ಮಹದೇವಪ್ಪ; ಗೋಧಿ ಮಿಶ್ರಿತ ಕೆಂಪು ಬಣ್ಣ, ಕಪ್ಪು ಬಣ್ಣದ ಉದ್ದ ಕೂದಲು, ಸಾಧಾರಣ ಶರೀರ, ಅಗಲ ಮೂಗು, ಕಪ್ಪು ದಪ್ಪ ಮೀಸೆ ಹೊಂದಿರುವ ಈತ 5.10 ಅಡಿ ಎತ್ತರದವರಾಗಿದ್ದಾರೆ.ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುವ ಈತ, ಉದ್ದ ತೋಳಿನ ಬಿಳಿ ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಟೈಟಾನ್ ವಾಚ್ ಮತ್ತು ಪಾದರಕ್ಷೆ ಧರಿಸಿದ್ದಾರೆ.
ಈತ ಪತ್ತೆಯಾದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: ಮೂಡುಬಿದಿರೆ ಪೊಲೀಸು ಠಾಣೆ-08258-236333; ಮೂಡುಬಿದಿರೆ ಪೊಲೀಸು ನಿರೀಕ್ಷಕರು - 9480802314.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News