ಮಂಗಳೂರು ಸ್ಪೋಟಿಂಗ್ ಕ್ಲಬ್ ವತಿಯಿಂದ ನೆಹರೂ ಮೈದಾನದಲ್ಲಿ ಎಂ.ಎಸ್.ಸಿ ಕಪ್ ಪುಟ್‌ಬಾಲ್ ಪಂದ್ಯಾಟ ನಡೆಯಿತು

Update: 2016-04-22 16:37 GMT

ಮಂಗಳೂರು, ಎ.22: ಮಂಗಳೂರು ಸ್ಪೋಟಿಂಗ್ ಕ್ಲಬ್ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಆಹ್ವಾನಿತ ಎಂ.ಎಸ್.ಸಿ ಕಪ್ ಪುಟ್‌ಬಾಲ್ ಪಂದ್ಯಾಟದಲ್ಲಿ ಇವತ್ತು ನಡೆದ ಪಂದ್ಯದಲ್ಲಿ ಶಮ ಎಫ್.ಸಿ ಪುಸದ್ ಮಹಾರಾಷ್ಟ್ರ ಮತ್ತು ಫಸ್ಟ್ ಕಿಕ್ ಚೆನ್ನೈ ಪಂದ್ಯದಲ್ಲಿ ಎರಡು ತಂಡ ಗೋಲು ಹಾಕದ ಕಾರಣ ಪೆನಾಲ್ಟಿ ಶೂಟೌಟ್‌ನಲ್ಲಿ 4.5 ಫಸ್ಟ್ ಕಿಕ್ ಚೆನ್ನೈ ಜಯ ಭಾರಿಸಿದೆ.

 ನಾಳಿನ ಕ್ವಾರ್ಟರ್ ಫೈನಲ್ ಮೊದಲ ಪಂದ್ಯ ಮಧ್ಯಾಹ್ನ 3.15ಕ್ಕೆ ಮುಂಬೈ ಸ್ಪೋಟಿಂಗ್ ಮತ್ತು ಉಚ್ಚಿಲ ಇಲೆವೆನ್ ನಡುವೆ, ಎರಡನೆ ಪಂದ್ಯ ಸಂಜೆ 4.30 ಕ್ಕೆ ಡಿ.ವೈ.ಇ.ಎಸ್ ಬೆಂಗಳೂರು ಮತ್ತು ಸಾಕ್ಕೇರ್ ಉಳ್ಳಾಲ ನಡುವೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News