ಸಾಗರ ಕವಚ ಅಣುಕು ಕಾರ್ಯಚರಣೆ: ಮಿಲಾಗ್ರಿಸ್ ಚರ್ಚ್ - ಕಟೀಲು ದೇವಸ್ಥಾನದಲ್ಲಿ ಬಾಂಬ್ ಪತ್ತೆ

Update: 2016-04-22 16:46 GMT

ಮಂಗಳೂರು,ಎ.22:ನಗರದ ಮಿಲಾಗ್ರಿಸ್ ಚರ್ಚ್ ನಲ್ಲಿ ಮತ್ತು ಕಟೀಲು ದೇವಸ್ಥಾನದಲ್ಲಿ ಇಂದು ಪೊಲೀಸರು ಬಾಂಬನ್ನು ಪತ್ತೆ ಹಚ್ಚುವಲ್ಲಿ ಸಫಲರಾದರು.
ಇದು ಕರಾವಳಿಯಲ್ಲಿ ನಡೆಯುತ್ತಿರುವ ಎರಡು ದಿನದ ಸಾಗರ್ ಕವಚ ಅಣಕು ಕಾರ್ಯಚರಣೆಯಲ್ಲಿ ಮಿಲಾಗ್ರಿಸ್ ಚರ್ಚ್ ಮತ್ತು ಕಟೀಲು ದೇವಸ್ಥಾನದಲ್ಲಿ ಕಂಡುಬಂದ ನಕಲಿ ಬಾಂಬ್‌ಗಳು.

ನಗರದ ಮಿಲಾಗ್ರಿಸ್ ಚರ್ಚ್‌ನಲ್ಲಿ ಬಾಂಬನ್ನಿಡಲಾಗಿದೆ ಎಂಬ ಮಾಹಿತಿಯನ್ನಾಧರಿಸಿ ಬಂದರ್ ಠಾಣೆಯ ಪೊಲೀಸರು ಪರೀಶೀಲನೆ ನಡೆಸಿದಾಗ ಚರ್ಚ್‌ನೊಳಗೆ ಅಡಗಿಸಿಡಲಾಗಿದ್ದ ಬಾಂಬನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಅದೇ ರೀತಿ ಕಟೀಲು ದೇವಸ್ಥಾನದಲ್ಲಿ ಬಾಂಬನ್ನಿಡಲಾಗಿದೆ ಎಂಬ ಮಾಹಿತಿಯನ್ನಾಧರಿಸಿ ಬಜ್ಪೆ ಠಾಣಾ ಪೊಲೀಸರು ಪರೀಶೀಲನೆ ನಡೆಸಿದಾಗ ಕಟೀಲು ದೇವಸ್ಥಾನದ ಗೋಶಾಲೆಯಲ್ಲಿ ಅಡಗಿಸಡಲಾಗಿದ್ದ ಬಾಂಬನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಕೋಸ್ಟ್ ಗಾರ್ಡ್, ಐಬಿ, ಆಂತರಿಕ ಭದ್ರತಾ ವಿಭಾಗ, ಸ್ಥಳೀಯ ಪೊಲೀಸರು, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಮತ್ತು ನೌಕ ದಳ ಜಂಟಿಯಾಗಿ ಅಣಕು ಕಾರ್ಯಚರಣೆ ನಡೆಸುತ್ತಿದೆ.

ಸಾಗರ ಕವಚ ಅಣುಕು ಕಾರ್ಯಚರಣೆ ನಾಳೆಯು ಕೂಡ ನಡೆಯಲಿದೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಭದ್ರೆತಯನ್ನು ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News