ಬೇಸಿಗೆಯ ವಿಶೇಷ ರೈಲು

Update: 2016-04-22 18:26 GMT

ಉಡುಪಿ, ಎ.22: ಪ್ರಯಾಣಿಕರ ಅನುಕೂಲಕ್ಕಾಗಿ ತಿರುವನಂತಪುರ- ಮಡಗಾಂವ್- ತಿರುವನಂತಪುರ ನಡುವೆ ಬೇಸಿಗೆ ಕಾಲದ ವಿಶೇಷ ರೈಲೊಂದನ್ನು ದಕ್ಷಿಣ ರೈಲ್ವೆಯ ಸಹಕಾರದೊಂದಿಗೆ ಓಡಿಸಲು ಕೊಂಕಣ ರೈಲ್ವೆ ಮುಂದಾಗಿದೆ. ಎ.27ರಿಂದ ಜೂನ್ 8ರವರೆಗೆ ಪ್ರತಿ ಬುಧವಾರ ರಾತ್ರಿ 8:15ಕ್ಕೆ ತಿರುವನಂತಪುರಂ ಬಿಡುವ ರೈಲು ನಂ.00615, ಮರುದಿನ ಸಂಜೆ 4:10ಕ್ಕೆ ಮಡಗಾಂವ್ ತಲುಪಲಿದೆ. ಮರು ಪ್ರಯಾಣದಲ್ಲಿ ಪ್ರತಿ ಗುರುವಾರ (ಎ.28ರಿಂದ ಜೂ.9ರವರೆಗೆ) ಸಂಜೆ 5:20ಕ್ಕೆ ಮಡಗಾಂವ್‌ನಿಂದ ಹೊರಡುವ ರೈಲು (00616) ಶುಕ್ರವಾರ ಅಪರಾಹ್ನ 2 ಗಂಟೆಗೆ ತಿರುವನಂತಪುರಂ ತಲುಪಲಿದೆ.
ಈ ರೈಲಿಗೆ ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಸ್ಟೇಶನ್‌ಗಳಲ್ಲಿ ನಿಲುಗಡೆ ಇರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News