ಉಡುಪಿಯಲ್ಲಿ ಮರಳಿನ ಅಭಾವ: ಕಾರ್ಮಿಕರಿಂದ ಧರಣಿ

Update: 2016-04-22 18:33 GMT

ಉಡುಪಿ, ಎ.22: ಉಡುಪಿ ಜಿಲ್ಲೆ ಯಲ್ಲಿ ಉಂಟಾಗಿರುವ ಮರಳಿನ ಅಭಾವವನ್ನು ಖಂಡಿಸಿ ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ಜಿಲ್ಲಾ ಘಟಕ ಶುಕ್ರವಾರ ಮಣಿಪಾಲ ದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಧರಣಿ ನಡೆಸಿತು.
ಮೊದಲು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಧರಣಿ ನಡೆಸಿದ ಕಾರ್ಮಿಕರು ಬಳಿಕ ವಾಹನ ಜಾಥಾದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಲ್ಲಿಯೂ ಧರಣಿ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮರಳುನೀತಿ ಜಾರಿಗೆ ಬರುವವ ರೆಗೆ ಮಾನವೀಯತೆ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಎ.23 ರಿಂದ ಮರಳು ತೆಗೆಯಲು ಅನುವು ಮಾಡಿಕೊಡಬೇಕು. ಪ್ರತಿವರ್ಷವೂ ಮರಳಿನ ಸಮಸ್ಯೆ ಉಂಟಾಗುತ್ತಿದ್ದು, ಅದಕ್ಕೆ ಮೊದಲೇ ಸಂಬಂಧಪಟ್ಟವರು ಈ ರೀತಿಯಾಗದಂತೆ ನೋಡಿಕೊಳ್ಳ ಬೇಕು. ಉಡುಪಿ ಜಿಲ್ಲೆಯಿಂದ ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ಮರಳು ಸಾಗಾಟ ಆಗದಂತೆ ಕ್ರಮ ತೆಗೆದು ಕೊಳ್ಳಬೇಕು. ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಮರಳಿನ ಬೆಲೆಯನ್ನು ಒಂದೇ ರೀತಿ ನಿಗದಿ ಪಡಿಸಬೇಕು. ಮರಳು ಅಕ್ರಮ ದಾಸ್ತಾನು ಮತ್ತು ಸಾಗಾಟಕ್ಕೆ ಕಡಿವಾಣ ಹಾಕಬೇಕು. ಕೆಂಪು ಕಲ್ಲು, ಪಾದೆಕಲ್ಲು ಇನ್ನಿತರ ಕಟ್ಟಡ ಸಾಮಗ್ರಿಗಳನ್ನು ಸಾಗಿ ಸುವ ವಾಹನಗಳಿಗೆ ಕೇಸು ಹಾಕುವ ಬದಲು ಸಂಬಂಧಪಟ್ಟ ಅಕ್ರಮವಾಗಿ ನಡೆಯುವ ಕೋರೆಗಳು ಮತ್ತು ಕ್ರಷರ್‌ಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
 ಧರಣಿಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಮುಖಂಡರಾದ ರಾಘ ವೇಂದ್ರ ಶೆಟ್ಟಿ, ಚಂದ್ರಿಕಾ ಶೆಟ್ಟಿ, ರವಿಶಾಸ್ತ್ರಿ ಬನ್ನಂಜೆ, ಸುರೇಶ್ ಶೇರಿಗಾರ್, ಪ್ರವೀಣ್ ಹಿರಿಯಡ್ಕ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News