ಮುಲ್ಕಿ : ಮೇ.1 ರಂದು ಯಕ್ಷಗಾನಕ್ಕಾಗಿ ಜೀವನ ಮುಡಿಪಾಗಿಟ್ಟಿರುವ ಸುಮಾರು 60 ಮಂದಿ ಸಾಧಕರಿಗೆ ಸನ್ಮಾನ

Update: 2016-04-23 10:41 GMT

ಮುಲ್ಕಿ, ಎ. 23: ಯಕ್ಷಗಾನ ಲೋಕದ ಹಾಸ್ಯಕಲಾವಿದ ಸೀತಾರಾಮ ಕುಮಾರ್ ಅವರ ಷಷ್ಟಿ ಸಂಭ್ರಮದ ಪ್ರಯುಕ್ತ ಯಕ್ಷಗಾನಕ್ಕಾಗಿ ಜೀವನ ಮುಡಿಪಾಗಿಟ್ಟಿರುವ ಸುಮಾರು 60 ಮಂದಿ ಸಾಧಕರು, ಪೋಷಕರು ಹಾಗೂ ಕಲಾವಿದರನ್ನು ಎ.30 ಮತ್ತು ಮೇ.1 ರಂದು ಹಳೆಯಂಗಡಿ ಪಾವಂಜೆ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಶಾರದ್ವತ ಯಜ್ಞಾಂಗಣದಲ್ಲಿ ನಡೆಯಲಿರುವ  ಸೀತಾರಾಮ ಷಷ್ಟಿ ಸಂಭ್ರಮ ಕಾರ್ಯಕ್ರಮದಲ್ಲಿ ಸನಮಾನಿಸಲಾಗುವುದು ಎಂದು ಯಕ್ಷಗಾನ ಪೋಷಕ, ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

  ಈ ಸಂಬಂಧ ಶನಿವಾರ ಪಾವಂಜೆ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎ.30 ರಂದು ಸಂಜೆ 5 ರಿಂದ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ 30 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುದು ಎಂದ ಅವರು, ಮೇ 1 ರಂದು ಉಳಿದ 30 ಮಂದಿ ಸಾಧಕರನ್ನು ಸನಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಹಿದೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಕೆ.ಎಸ್. ನಿತ್ಯಾನಂದ ವೇಧ ವಿಜ್ಞಾನ ಮಂದಿರ ಚಿಕ್ಕಮಗಳೂರು, ಡಾ. ಯಾಜಿ ಎಚ್ ನಿರಂಜನ ಭಟ್ ಶುಭನುಡಿಗಳನ್ನಾಡಲಿದ್ದು, ವೇ.ಮೂ. ಕೆ. ಲಕ್ಷ್ಮಿನಾರಾಯಣ ಅಸ್ರಣ್ಣ ಕಟೀಲು ಆಶೀರ್ವಚನ ಗೈಯಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಮಾಜೀ ಸಚಿವ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದಾಋಎ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News