ಭಟ್ಕಳ: ಆರ್.ವಿ.ದೇಶಪಾಂಡೆಯಿಂದ ಕುಡಿಯುವ ನೀರು ವಿತರಣೆಗೆ ಚಾಲನೆ

Update: 2016-04-23 13:21 GMT

 ಭಟ್ಕಳ: ತಾಲೂಕಿನೆಲ್ಲೆಡೆ ನೀರಿಗೆತೀವ್ರತೊಂದರೆಯಾಗಿದ್ದುಜನರಿಗೆಕುಡಿಯುವ ನೀರು ಸಿಗದಂತಾ ಸ್ಥಿತಿಗೆ ಬಂದಿರುವುದುಜನತೆಕಂಗಾಲಾಗುವಂತೆ ಮಾಡಿದೆ. ಮಾವಳ್ಳಿ-1 ಮತ್ತು 2 ಗ್ರಾಮ ಪಂಚಾಯತ್‌ನಿಂದಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದುತಾಲೂಕಿಗೆ ಆಗಮಿಸಿದ್ದ ಜಿಲ್ಲಾಉಸ್ತುವಾರಿ ಸಚಿವರು ಹಾಗೂ ಬೃಹತಕೈಗಾರಿಕಾ ಸಚಿವಆರ್.ವಿ.ದೇಶಪಾಂಡೆ ಸ್ವತಹ ಭೇಟಿ ನೀಡಿಜನರೊಂದಿಗೆ ಸಮಸ್ಯೆಗಳನ್ನು ಆಲಿಸಿದರು.

ತಾಲೂಕಿನಲ್ಲಿ ಕಳೆದ ಕೆಲವು ತಿಂಗಳಿನಿಂದಲೇ ಕುಡಿಯುವ ನೀರಿನಕ್ಷಾಮಎದುರಾಗಿದ್ದು, ತಾಲೂಕಿನಜನರುಕುಡಿಯುವ ನೀರಿಕ್ಷಾಮದಿಂದತತ್ತರವಾಗಿದ್ದಾರೆ. ಈ ಹಿನ್ನೆಲೆಯಲ್ಲಿರಾಜ್ಯ ಸರ್ಕಾರದಿಂದತಾತ್ಕಾಲಿಕವಾಗಿಜನರಿಗೆಕುಡಿಯುವ ನೀರಿನ ಸರಬರಾಜಿಗೆಟ್ಯಾಂಕರ್ ಮೂಲಕ ನೀರನ್ನು ನೀಡುವಕಾರ್ಯಕ್ರಮವು ನಡೆಯುತ್ತಿದ್ದು, ಮುರ್ಡೇಶ್ವರದ ಮಾವಳ್ಳಿ-1 ಮತ್ತು 2 ಗ್ರಾಮ ಪಂಚಾಯತ್‌ನಿಂದಗುಮ್ಮನಕ್ಲುಗ್ರಾಮದ 91 ಮನೆಗಳಿಗೆ 5000 ಲೀಟರಕುಡಿಯುವ ನೀರಿನ ವಿತರಣೆಕಾರ್ಯಕ್ರಮವನ್ನುಜಿಲ್ಲಾಉಸ್ತುವಾರಿ ಸಚಿವರು ಹಾಗೂ ಬೃಹತಕೈಗಾರಿಕಾ ಸಚಿವರಾದಆರ್.ವಿ. ದೇಶಪಾಂಡೆ ನೆರವೆರಿಸಿದರು.

ಕಾಯ್ಕಿಣಿಗ್ರಾಮ ಪಂಚಾಯತ್‌ನಿಂದಲೂಕುಡಿಯುವ ನೀರಿನ ಸರಬರಾಜುಆರಂಭಿಸಲಾಗಿದ್ದುಜನತೆಗೆತಾತ್ಕಾಲಿಕವಾಗಿ ಸಮಸ್ಯೆ ಪರಿಹಾರವಾದಂತಾಗಿದೆ. ಹಲವು ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಯಿತು.

ಜನತೆಯೊಂದಿಗೆ ಮಾತನಾಡಿದ ಸಚಿವರು ಮನೆಗಳಲ್ಲಿ ದನಕರುಗಳು ಇದ್ದಲ್ಲಿ ನೀರು ಸರಬರಾಜು ಮಾಡುವವರು ಹೆಚ್ಚಿನ ನೀರನ್ನುಕೊಡಬೇಕು. ಯಾವುದೇಕಾರಣಕ್ಕೂಜನ ಜಾನುವಾರುಗಳಿಗೆ ನೀರಿಲ್ಲದಂತಾಗಬಾರದುಎಂದು ಅಧಿಕಾರಿಗಳಿಗೆ ಹೇಳಿದರು. ಮುರ್ಡೇಶ್ವರದಲ್ಲಿರಾಜೀವಗಾಂಧಿಕುಡಿಯುವ ನೀರು ಸರಬರಾಜುಯೋಜನೆಯಿಂದ ಹೆಚ್ಚಿನ ನೀರುದೊರೆಯುವಂತಾಗಬೇಕುಎಂದುಗ್ರಾಮ ಪಂಚಾಯತ್ ಸದಸ್ಯ ಕೃಷ್ಣಾ ನಾಯ್ಕ ಆಗ್ರಹಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿ ವ್ಯವಸ್ಥೆಯನ್ನು ಸರಿಪಡಿಸಲು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News