ನೀರಿನ ಕೊರತೆ ಉಂಟಾಗದಂತೆ ಕ್ರಮ: ಮೇಯರ್ ಹರಿನಾಥ್

Update: 2016-04-23 18:46 GMT

ಮಂಗಳೂರು, ಎ.23: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಒಳಹರಿವು ಕ್ಷೀಣಿಸುತ್ತಿರುವುದರಿಂದ ನಗರದಲ್ಲಿ ಸಾರ್ವಜನಿಕರಿಗೆ ನೀರಿನ ಕೊರತೆ ಉಂಟಾಗ ದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿಕೊಳ್ಳ ಬೇಕು ಎಂದು ಮೇಯರ್ ಹರಿನಾಥ್ ಸಾರ್ವಜನಿ ಕರಿಗೆ ಮನವಿ ಮಾಡಿದ್ದಾರೆ.

ತುಂಬೆ ವೆಂಟೆಡ್ ಡ್ಯಾಂನಲ್ಲಿ ಮನಪಾ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ನೀರಿನ ಮಟ್ಟ ವೀಕ್ಷಿಸಿ, ಅಧಿಕಾರಿಗಳೊಂದಿಗೆ ನೀರು ಪೂರೈಕೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ನೀರು ಪೂರೈಕೆಯಾಗದ ಸ್ಥಳಗಳಿಗೆ ಈಗಾಗಲೇ 5 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಾಸಕ ಮೊಯ್ದಿನ್ ಬಾವ ಅವರು ಖುದ್ದಾಗಿ ತಮ್ಮ ಕ್ಷೇತ್ರದಲ್ಲಿ ಹೆಚ್ಚುವರಿ ಟ್ಯಾಂಕರ್ ವ್ಯವಸ್ಥೆಯನ್ನು ಮಾಡಿದ್ದಾರೆ. ಟ್ಯಾಂಕರ್‌ಗಳು ಹೋಗಲು ಸಾಧ್ಯವಿಲ್ಲದ ಎತ್ತರ ಹಾಗೂ ಕಿರಿದಾದ ಪ್ರದೇಶಗಳಿಗೆ ಪಿಕ್‌ಅಪ್ ವಾಹನಗಳಲ್ಲಿ ಸಣ್ಣ ಟ್ಯಾಂಕ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.

ತುರ್ತು ಸಂದರ್ಭಗಳಲ್ಲಿ ಖಾಸಗಿ ನೀರಿನ ಮೂಲಗಳನ್ನು ಮನಪಾ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಮೂಲಕ ಸ್ವಾಧೀನಪಡಿಸಿ ಕುಡಿಯುವ ನೀರಿನ ಅಗತ್ಯವಿರುವಲ್ಲಿಗೆ ಪೂರೈಕೆ ಮಾಡಲಾಗುವುದು. ಜನರು ಕುಡಿಯುವ ನೀರನ್ನು ಕೇವಲ ಕುಡಿಯುವುದಕ್ಕಾಗಿಯೇ ಮಿತವಾಗಿ ಬಳಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

6 ಕಡೆ ಬೋರ್‌ವೆಲ್‌ಗಳು

ನಗರದಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಾಮಂಜೂರು ಹಾಗೂ ಪಚ್ಚನಾಡಿಯಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಿಸಲಾಗಿದ್ದು, ಉಳಿದಂತೆ ಇತರ ನಾಲ್ಕು ಕಡೆಗಳಲ್ಲಿ ಬೋರ್‌ವೆಲ್‌ಗಳನ್ನು ಒಂದೆರಡು ದಿನಗಳಲ್ಲಿ ಕೊರೆಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲೋಟ್ ಪಿಂಟೋ ತಿಳಿಸಿದರು.

ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ಉಚಿತ ನೀರು ಪೂರೈಕೆ


ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಉಚಿತವಾಗಿ ಪೂರೈಕೆ ಮಾಡಲಾಗುತ್ತದೆ. ಸಂಬಂಧಪಟ್ಟ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಲ್ಲಿ ಅಗತ್ಯವಿರುವಲ್ಲಿ ನೀರು ಪೂರೈಕೆ ಮಾಡಲಾಗುವುದು. ಜನರು ಯಾವುದೇ ಹಣವನ್ನು ತೆರಬೇಕಾಗಿಲ್ಲ ಎಂದು ಮೇಯರ್ ಹರಿನಾಥ್ ಸ್ಪಷ್ಟಪಡಿಸಿದರು. ನೀರನ್ನು ಸಮರ್ಪಕವಾಗಿ ವಿತರಣೆ ಮಾಡುವ ನಿಟ್ಟಿನಲ್ಲಿ ಇಂಜಿನಿಯರ್ ಕಾರ್ಯವ್ಯಾಪ್ತಿಯನ್ನು ಮರು ಹಂಚಿಕೆ ಮಾಡಲಾಗಿದೆ. ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಮತ್ತು ನೀರು ಪೋಲಾಗುತ್ತಿರುವುದು ಕಂಡಲ್ಲಿ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಥವಾ ಕಿರಿಯ ಇಂಜಿನಿಯರ್ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಮನಪಾದಿಂದ ಕಟ್ಟಡ ನಿರ್ಮಾಣಕ್ಕೆ ನೀರನ್ನು ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಕಟ್ಟಡ ನಿರ್ಮಾಣ ಹಾಗೂ ರಸ್ತೆಗೆ ಕುಡಿಯುವ ನೀರನ್ನು ಸಿಂಪಡಿಸಬಾರದು. ತುಂಬೆ ಮತ್ತು ಎಎಂಆರ್ ಡ್ಯಾಂನಿಂದ 16 ದಿನಗಳಿಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದು ಎಂದು ಮೇಯರ್ ಹರಿನಾಥ್ ತಿಳಿಸಿದರು. ಈ ಸಂದರ್ಭ ಉಪ ಮೇಯರ್ ಸುಮಿತ್ರಾ ಕರಿಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿ ಲೋಟ್ ಪಿಂಟೋ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಅಪ್ಪಿ, ಸದಸ್ಯರಾದ ಸುಧೀರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಮುಹಮ್ಮದ್, ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಹಿರಿಯ ಅಧಿಕಾರಿಗಳಾದ ಲಿಂಗೇ ಗೌಡ ಉಪಸ್ಥಿತರಿದ್ದರು.


ಜೂನ್‌ನಿಂದ ಹೊಸ ಡ್ಯಾಂ ಕಾರ್ಯಾಚರಣೆ

ನಿರ್ಮಾಣ ಹಂತದಲ್ಲಿರುವ ತುಂಬೆಯ 13 ಮೀಟರ್ ಎತ್ತರದ ನೂತನ ವೆಂಟೆಂಡ್ ಕಾಮಗಾರಿ ಪೂರ್ಣಗೊಂಡಿದ್ದಲ್ಲಿ, ಈ ಬಾರಿ ಕುಡಿಯುವ ನೀರಿನ ಕೊರತೆ ನೀಗಿಸುವಲ್ಲಿ ಸ್ವಲ್ಪ ಮಟ್ಟಿನ ಸಹಕಾರ ಆಗುತ್ತಿತ್ತು. ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ಜೂನ್‌ನಲ್ಲಿ ನೂತನ ಡ್ಯಾಂ ಕಾರ್ಯಾಚರಣೆ ಮಾಡಲಿದೆ ಎಂದು ಮೇಯರ್ ಹರಿನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಎತ್ತಿನಹೊಳೆ ಯೋಜನೆಯಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆಯಲ್ಲಾ?, ಮಾತ್ರವಲ್ಲದೆ ಮನಪಾ ಸಾಮಾನ್ಯ ಸಭೆಯಲ್ಲಿ ಯೋಜನೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆಯಲ್ಲಾ ಎಂಬ ಪ್ರಶ್ನೆಗೆ, ಆ ಬಗ್ಗೆ ಸದ್ಯ ನಾವೇನೂ ಹೇಳುವುದಿಲ್ಲ. ಆದರೆ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದು ಎಂದಾದಲ್ಲಿ ಹೋರಾಟಕ್ಕೆ ಸಿದ್ಧ ಎಂದು ಮೇಯರ್ ನುಡಿದರು.

ಕುಡಿಯುವ ನೀರಿಗಾಗಿ ಕರೆಮಾಡಿ

ಕುಡಿಯುವ ನೀರಿನ ಸಮಸ್ಯೆ ಅಥವಾ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಸಾರ್ವಜನಿಕರು ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಅಥವಾ ಸಹಾಯಕ/ಕಿರಿಯ ಅಭಿಯಂತರರನ್ನು ಮೊಬೈಲ್ ಮೂಲಕ ಸಂಪರ್ಕಿಸಬಹುದು. ವಾರ್ಡ್-
14, 21, 22, 53, 54, 52, 46, 47, 48, 49-ಲಿಂಗೇಗೌಡ (9480871845), ನರೇಶ್ ಶೆಣೈ (9448502777) ರಿಚರ್ಡ್ (9448549167), ಯಶವಂತ್ ಕುಮಾರ್ (9480871860) ಲಕ್ಷ್ಮಣ್ ಪೂಜಾರಿ (9448 696487) ಶ್ರೀಗಣಪತಿ (9448391585)
ವಾರ್ಡ್-12, 13, 15, 16, 20, 23- ಗಣೇಶನ್ ಆರ್. (9480871880) ಪಾರ್ವತಿದೇವಿ (9448237851), ಲತಾ (9480871881)
ವಾರ್ಡ್-1ರಿಂದ 8-ರವಿಶಂಕರ್ (9480871875), ಖಾದರ್ (948216005)
ವಾರ್ಡ್-9, 10, 11, 60-ದೇವರಾಜ್ (7411832998)
ವಾರ್ಡ್-30, 32, 33, 34-ಶ್ರೀಮುರಳಿಹಳ್ಳಿ (9448837205) ದೇವಿಪ್ರಸಾದ್ (94808 71890), ಅಮೃತ್ ಕುಮಾರ್ (948087872).
ವಾರ್ಡ್-40, 41, 42, 44, 39-ಸುರೇಶ್ 9845819818
ವಾರ್ಡ್-17, 18, 19, 25, 24, 26, 27, 43, 36-ರಾಜೇಶ್ (9480871888)
ವಾರ್ಡ್-37, 38, 50, 51-ಕೃಷ್ಣಾನಂದ (9482210385) ರೂಪಾ (9480871883)
ವಾರ್ಡ್-55, 56, 57, 58, 59, 28-ಪ್ರತಿಮಾ (9480871897)
ವಾರ್ಡ್-35,45-ವಿಶಾಲ್‌ನಾಥ್ (9480871859) ನಿತ್ಯಾನಂದ (9448869423)
ವಾರ್ಡ್-31-ರಘುಪಾಲ್(9448254274)
ವಾರ್ಡ್-29-ವಿನೋದ್ ಕುಮಾರ್ (9448300753)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News