ವಿಟ್ಲ : ಕುಕ್ಕಿಲ ಬದ್ರಿಯಾ ಜುಮಾ ಮಸೀದಿಯ ನವೀಕೃತ ಮಸೀದಿ ಹಾಗೂ ಮದ್ರಸ ಕಟ್ಟಡ ಉದ್ಘಾಟನೆ

Update: 2016-04-24 13:21 GMT

ವಿಟ್ಲ : ಮನುಷ್ಯರ ನಡುವೆ ಬೇರೂರಿರುವ ಅಪನಂಬಿಕೆಗಳು, ಅವಿಶ್ವಾಸಗಳನ್ನು ದೂರ ಮಾಡಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುವ ಮೂಲಕ ಮನುಷ್ಯ ಮನಸ್ಸುಗಳ ನಡುವೆ ಪ್ರೀತಿಯನ್ನು ಹಂಚಬೇಕು. ಪರಸ್ಪರ ಪ್ರೀತಿ ಇದ್ದಾಗ ಮಾತ್ರ ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸಾಧ್ಯ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.

        ವಿಟ್ಲಪಡ್ನೂರು ಗ್ರಾಮದ ಕುಕ್ಕಿಲ ಬದ್ರಿಯಾ ಜುಮಾ ಮಸೀದಿಯ ನವೀಕೃತ ಮಸೀದಿ ಹಾಗೂ ಮದ್ರಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಾತಿವಾದಿ ಹಾಗೂ ಮತೀಯವಾದಿಗಳನ್ನು ಪ್ರೀತಿಯನ್ನು ಹಂಚುವ ಮೂಲಕ ವಿರೋಧಿಸುವ ಕೆಲಸ ನಡೆಯಬೇಕು ಎಂದರು. ತನ್ನ ಧರ್ಮವನ್ನು ಅನುಸರಿಸುವ ಮೂಲಕ ಸಹೋದರ ಧರ್ಮಗಳನ್ನು ಗೌರವಿಸಿದಾಗಹ ಈ ಸಮಾಜದಲ್ಲಿ ಯಾವುದೇ ರೀತಿಯ ಜಾತಿ ಕಲಹಗಳು ಉಂಟಾಗಲು ಸಾಧ್ಯವಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

        ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ ಹಿಂದೂ, ಕ್ರೈಸ್ತ, ಇಸ್ಲಾಂ ಧರ್ಮದ ಸಂದೇಶಗಳನ್ನು ಅರ್ಥಮಾಡಿಕೊಂಡು ಮುಂದೆ ಹೋಗಬೇಕು. ಧರ್ಮದ ಬಗ್ಗೆ ಚಿಂತನೆ ಕಡಿಮೆಯಾಗಿದ್ದರ ಪರಿಣಾಮವಾಗಿ ಧರ್ಮಗಳ ನಡುವೆ ಘರ್ಷಣೆ ಉಂಟಾಗುತ್ತಿದೆ. ಪ್ರತಿಯೊಂದು ಧರ್ಮವನ್ನು ನಮ್ಮ ಸಹೋದರ ಧರ್ಮ ಎಂಬ ಭಾವನೆಯಿಂದ ಕಂಡಾಗ ಧಾರ್ಮಿಕ ಸೌಹಾರ್ದತೆ ಸಾಧ್ಯ ಎಂದರು.

        ಸಯ್ಯಿದ್ ಕೆ.ಎಸ್. ಮುಕ್ತಾರ್ ತಂಙಳ್ ಕುಂಬೋಳ್ ಮಸೀದಿ ಕಟ್ಟಡ ಉದ್ಘಾಟಿಸಿದರು. ಶೈಖುನಾ ಅಹಮ್ಮದ್ ಉಸ್ತಾದ್ ಪಾತೂರು ಮದ್ರಸ ಕಟ್ಟಡ ಉದ್ಘಾಟಿಸಿದರು. ಸಯ್ಯಿದ್ ಪೂಕುಂಞಿಕೋಯ ತಂಙಳ್ ಉದ್ಯಾವರ ದುವಾಶೀರ್ವಚನಗೈದರು.

        ಕೆ.ಎ ಅಬ್ದುಲ್ ರಝಾಕ್ ಲತೀಫಿ ಕುಂತೂರು, ಯು.ಕೆ ಅಬ್ದುಲ್ ಅಝೀರ್ ದಾರಿಮಿ, ಅನಸ್ ಸಿದ್ದೀಖಿ ಕಾಮಿಲ್ ಸಖಾಫಿ, ವಿಟ್ಲ ಪಡ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ್ ಶೆಟ್ಟಿ, ಸದಸ್ಯರಾದ ಸಿದ್ದಿಕ್ ಸರಾವು, ಶರೀಫ್ ಕೊಡಂಗೆ, ಮಾಜಿ ಸದಸ್ಯ ಉಮ್ಮರ್ ಕೊಡಂಗೆ, ತಾ.ಪಂ. ಸದಸ್ಯ ಬಿ.ಎಂ. ಅಬ್ಬಾಸ್ ಅಲಿ, ಮಾಜಿ ಸದಸ್ಯ ಮಾಧವ ಮಾವೆ, ಪ್ರಮುಖರಾದ ಮಹಾಬಲೇಶ್ವರ ಭಟ್ ಕುಕ್ಕಿಲ, ಗೋಪಾಲಕೃಷ್ಣ ಭಟ್ ಕಿನಿಲ, ಪಿ.ಕೆ ಇಬ್ರಾಹಿಂ, ಸಂದೇಶ್ ಶೆಟ್ಟಿ ಬಿಕ್ನಾಜೆ, ಅರವಿಂದ ರೈ, ಉಮೇಶ್ ಶೆಟ್ಟಿ, ಕೆ.ಎ ಹಮೀದ್ ಕೊಡಂಗಾಯಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

        ಹಾಜಿ ಕೆ.ಎಚ್. ಅಬ್ದುಲ್ಲ ಕುಕ್ಕಿಲ ಪ್ರಸ್ತಾವನೆಗೈದರು. ಕೆ.ಎ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಸ್ವಾಗತಿಸಿ, ಮಹಮ್ಮದ್ ಗಝಾಲಿ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News