ಮೂಡುಬಿದಿರೆ : ರಾಷ್ಟ್ರ ನಿರ್ಮಾಣದಲ್ಲಿ ಕೆಥೋಲಿಕ್ ಯುವಜನತೆಯ ಕೊಡುಗೆ ಸಲ್ಲಲಿ - ಡೆನಿಸ್ ಮೊರಾಸ್ ಪ್ರಭು

Update: 2016-04-24 13:38 GMT
ಐಸಿವೈಎಮ್ ಮೊತಿಯಳೋತ್ಸವ ಕಾರ್ಯಕ್ರಮದಲ್ಲಿ ಮೂಡುಬಿದಿರೆ ವಲಯದಿಂದ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರೋಶನ್ ಕ್ಯಾಸ್ತೆಲಿನೊ, ರೋಶನ್ ಮಾಡ್ತಾ ಮತ್ತು ಜೈಸನ್ ತಾಕೊಡೆ ಅವರನ್ನು ಸನ್ಮಾನಿಸಲಾಯಿತು.

    ಮೂಡುಬಿದಿರೆ: ಕಥೋಲಿಕ್ ಯುವಜನರು ಸರ್ವ ಧರ್ಮೀಯ ಯುವಜನರ ಜೊತೆಯಾಗಿ ದೈವೀಕತೆಯೊಂದಿಗೆ ತಮ್ಮ ಯುವಸೇವೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡುವಂತಾಗಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರು ಅತೀ ವಂದನೀಯ ಮೊನ್ಸಿಂಞೊರ್ ಡೆನಿಸ್ ಮೊರಾಸ್ ಪ್ರಭು ನುಡಿದರು. ಅವರು ರವಿವಾರ ಅಲಂಗಾರು ಹೋಲಿ ರೋಸರಿ ಚರ್ಚ್‌ನಲ್ಲಿ ಮೂಡುಬಿದಿರೆ ವಲಯದ ಭಾರತೀಯ ಕಥೋಲಿಕ್ ಯುವ ಸಂಚಾಲನದ 30ನೇ ವರ್ಷದ ಸಂಭ್ರಮಾಚರಣೆ ’ಮೊತಿಯಳೋತ್ಸವ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ವಂದನೀಯ ಗುರು ಆಸ್ಟಿನ್ ಪೀಟರ್ ಪೆರಿಸ್ ಪಾರಿವಾಳಗಳನ್ನು ಹಾರಲು ಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಐಸಿವೈಎಮ್ ರಾಷ್ಟ್ರೀಯ ಅಧ್ಯಕ್ಷ ಸಿಜೊ ಅಂಬಾಟ್ ಮಾತನಾಡಿ ಸಮಾಜಕ್ಕೆ ಕಂಟಕವಾಗುತ್ತಿರುವ ಮೂಲಭೂತವಾದಿಗಳು ಮತ್ತು ಭಯೋತ್ಪಾದನೆಯ ವಿರುದ್ಧ ಯುವಜನರು ದನಿಯೆತ್ತಬೇಕಿದೆ. ಯುವಜನತೆ ಡಿಜಿಟಲ್ ಲೋಕದಿಂದ  ಸಮಾಜದ ಮುಖ್ಯವಾಹಿನಿಗೆ ಸೇರಬೇಕಾದ ತುರ್ತು ಅಗತ್ಯವಿದೆ. ಜಾತ್ಯಾತೀತ ಭಾರತದಲ್ಲಿ ಎಲ್ಲ ಯುವಜನರೊಂದಿಗೆ ಬೆರೆತು ದೇಶಕ್ಕೆ ಮಹತ್ತರ ಕೊಡುಗೆ ನೀಡಬೇಕಿದೆ’ ಎಂದರು.
ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಮ್ ನಿರ್ದೇಶಕರಾದ ವಂದನೀಯ ಗುರು ರೊನಾಲ್ಡ್ ಡಿಸೋಜಾ, ಅಲಂಗಾರು ಹೋಲಿ ರೋಸರಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಲೋಬೊ, ಅಲಂಗಾರು ಐಸಿವೈಎಮ್‌ನ ಸಚೇತಕ ಐವನ್ ಪಿಂಟೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೂಡುಬಿದಿರೆ ವಲಯ ಐಸಿವೈಎಮ್ ನಿರ್ದೇಶಕ ವಂ. ಬಾಸಿಲ್ ವಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
 ಮಂಗಳೂರು ಧರ್ಮಪ್ರಾಂತ್ಯದ ನಿಕಟಪೂರ್ವ ಅಧ್ಯಕ್ಷೆ ಮೆಲ್ರಿಡಾ ರೊಡ್ರಿಗಸ್, ಮೂಡುಬಿದಿರೆ ವಲಯದ ಉಪಾಧ್ಯಕ್ಷ ರೆಕ್ಸನ್ ಕ್ರಾಸ್ತಾ ತಾಕೊಡೆ, ಉಪಾಧ್ಯಕ್ಷೆ ಪ್ರೆನ್ನಿ ಸೆರಾ ಹೊಸಬೆಟ್ಟು, ಜತೆ ಕಾರ್ಯದರ್ಶಿ ಪ್ರೀಮಲ್ ಡೆಸಾ ಶಿರ್ತಾಡಿ, ಖಜಾಂಚಿ ಪ್ರಶಾಂತ್ ಡಿಕೋಸ್ತಾ ವಾಮದಪದವು, ಲೆಕ್ಕಪರಿಶೋಧಕ ಪ್ರಜ್ವಲ್ ಡಿಸೋಜಾ ಪಾಲಡ್ಕ, ಆಮ್ಚೊ ಯುವಕ್ ಪ್ರತಿನಿಧಿ ರೋಯ್ಡನ್ ಫೆರ್ನಾಂಡಿಸ್ ಪಾಲಡ್ಕ, ಕ್ರೀಡಾ ಕಾರ್ಯದರ್ಶಿ ಫ್ರಾನ್ಸಿಸ್ ಮೊಂತೆರೊ ಸಿದ್ಧಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿ ಹರ್ಷಲ್ ಕೊರೆಯಾ ಮೂಡುಬಿದಿರೆ, ಅಂತರ್‌ಜಾಲ ನಿರ್ವಾಹಕ ವಿಲ್ಸನ್ ಮೊರಾಸ್, ನಿಕಟಪೂರ್ವ ಅಧ್ಯಕ್ಷ ಜ್ಯಾಕ್ಸನ್ ಎರಿಕ್ ಡಿಕೋಸ್ತಾ ವಾಮದಪದವು ಉಪಸ್ಥಿತರಿದ್ದರು.
 ಮೂಡುಬಿದಿರೆ ವಲಯದಿಂದ ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಮ್ ಕೇಂದ್ರಿಯ ಸಮಿತಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರೋಶನ್ ಕ್ಯಾಸ್ತೆಲಿನೊ ಪಾಲಡ್ಕ, ರೋಶನ್ ಮಾಡ್ತಾ ಅಲಂಗಾರು ಹಾಗೂ ಜೈಸನ್ ಸುವಾರಿಸ್ ತಾಕೊಡೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
  ಮೂಡುಬಿದಿರೆ ಐಸಿವೈಎಮ್ ವಲಯದ ಮಾಜಿ ಅಧ್ಯಕ್ಷರುಗಳಾದ ಜೆರಾಲ್ಡ್ ಡಿಕೋಸ್ತಾ ಸಿದ್ಧಕಟ್ಟೆ, ರೈಮಂಡ್ ಡಿಕುನ್ಹಾ ತಾಕೊಡೆ, ರೆಕ್ಸನ್ ಮಿರಾಂದಾ ಗಂಟಾಲ್ಕಟ್ಟೆ, ಅನಿಲ್ ಡಿಕುನ್ಹಾ ಹೊಸಬೆಟ್ಟು, ವಿಕ್ಟರ್ ಡಿಸೋಜಾ ಪಾಲಡ್ಕ, ವಿನ್ಸೆಂಟ್ ಡಿಸೋಜಾ ತಾಕೊಡೆ, ವಿನ್ಸೆಂಟ್ ಮಸ್ಕರೇನ್ಹಸ್ ಮೂಡುಬಿದಿರೆ, ಲೋಯ್ಡೆ ಆಸ್ಟಿನ್ ರೇಗೊ ತಾಕೊಡೆ, ವಿನೋದ್ ಪಿಂಟೊ ತಾಕೊಡೆ, ಪ್ರವೀಣ್ ಲೋಬೊ ಹೊಸಬೆಟ್ಟು, ಮರ್ವಿನ್ ಲೋಬೊ ಹೊಸಬೆಟ್ಟು, ಮ್ಯಾಥ್ಯೂ ಮಸ್ಕರೇನ್ಹಸ್ ಬೆಳುವಾಯಿ, ಸೆಲ್ವಿನ್ ಜೂಡ್ ಕುಲಾಸೊ ಹೊಸಬೆಟ್ಟು, ಜ್ಯಾಕ್ಸನ್ ಎರಿಕ್ ಡಿಕೋಸ್ತಾ ವಾಮದಪದವು ಅವರನ್ನು ಗೌರವಿಸಲಾಯಿತು. ಮೂಡುಬಿದಿರೆ ವಲಯ ಐಸಿವೈಎಮ್ ಸ್ಥಾಪಕಾಧ್ಯಕ್ಷರಾದ ಸೈಮನ್ ರೊಡ್ರಿಗಸ್ ಅಲಂಗಾರು ಪರವಾಗಿ ಅವರ ಪತ್ನಿ ಮತ್ತು ಪುತ್ರ ಗೌರವ ಸ್ವೀಕರಿಸಿದರು.
    ಗಾಜ್ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತ ಐಸಿವೈಎಮ್‌ನ ಹೊಸಬೆಟ್ಟು ಘಟಕ (ಪ್ರಥಮ) ಅಲಂಗಾರು ಘಟಕ ( ದ್ವಿತೀಯ) ಮೂಡುಬಿದಿರೆ ಘಟಕ (ತೃತೀಯ )ಗಳಿಗೆ ಬಹುಮಾನ ವಿತರಣೆ ನಡೆಯಿತು. ಪ್ರೀಮಲ್ ಡಿಸೋಜಾ ವಿಜೇತರ ವಿವರ ನೀಡಿದರು.
 ಐಸಿವೈಎಮ್ ವಲಯಾಧ್ಯಕ್ಷ ಅನೀಶ್ ಡಿಸೋಜಾ ಸ್ವಾಗತಿಸಿ ಕಾರ್ಯದರ್ಶಿ ಅವಿಶ್ ಸಲ್ಡಾನ್ಹಾ ವಾರ್ಷಿಕ ವರದಿ ವಾಚಿಸಿದರು. ಶಿರ್ತಾಡಿ ಐಸಿವೈಎಮ್ ಘಟಕದ ಸದಸ್ಯರು ಪ್ರಾರ್ಥನಾ ಗೀತೆ ಹಾಡಿದರು. ಜೈಸನ್ ಪಿರೇರಾ ಶಿರ್ತಾಡಿ ಮತ್ತು ಎಲ್ವಿರಾ ಸಿಕ್ವೇರಾ ಅಲಂಗಾರು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭಕ್ಕೂ ಮೊದಲು ವಲಯ ಐಸಿವೈಎಮ್ ಘಟಕಗಳಿಂದ ಹೊರೆಕಾಣಿಕೆ ಮೆರವಣಿಗೆ, ದಿವ್ಯ ಬಲಿಪೂಜೆ ನೆರವೇರಿಸಲಾಯಿತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News