ಮಂಗಳೂರು: ಎಂ.ಎಸ್.ಸಿ. ಕಪ್ ಫುಟ್ಬಾಲ್ ಪಂದ್ಯಾವಳಿ - ಮುಂಬೈ, ಉಳ್ಳಾಲ ತಂಡಗಳಿಗೆ ಜಯ

Update: 2016-04-24 17:04 GMT

ಮಂಗಳೂರು, ಎ. 21: ಮಂಗಳೂರು ಸ್ಪೋರ್ಟಿಂಗ್ ಕ್ಲಬ್ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಆಹ್ವಾನಿತ ಎಂ.ಎಸ್.ಸಿ. ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇಂದು ನಡೆದ ಮೊದಲ ಮತ್ತು ಎರಡನೆ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಸ್ಪೋರ್ಟಿಂಗ್ ತಂಡ ಮತ್ತು ಸೌಕರ್ ಉಳ್ಳಾಲ ತಂಡಗಳು ಬಯಭೇರಿ ಬಾರಿಸಿದೆ.
ಗೋವಾದ ಪಿವೈಇಎಂ ಸಲ್ಸೆಟೆ ಮತ್ತು ಮುಂಬೈ ಸ್ಪೋರ್ಟಿಂಗ್ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಇತ್ತಂಡಗಳಿಂದಲೂ ಯಾವುದೇ ಗೋಲ್ ಬಾರದ್ದರಿಂದ ಪೆನಲ್ಟಿ ಶೂಟೌಟ್‌ನಲ್ಲಿ ಮುಂಬೈ ಸ್ಪೋರ್ಟಿಂಗ್ ತಂಡ ಜಯ ಸಾಧಿಸಿದೆ.

ಎರಡನೆ ಸಮಿಫೈನಲ್ ಪಂದ್ಯದಲ್ಲಿ ಚೆನ್ನೈನ ಫಸ್ಟ್ ಕಿಕ್ ತಂಡದ ವಿರುದ್ಧ ಸೌಕರ್ ಉಳ್ಳಾಲ ತಂಡವು ಒಂದು ಗೋಲ್ ಬಾರಿಸುವ ಮೂಲಕ ವಿಜಯಿ ತಂಡವಾಗಿ ಮೂಡಿ ಬಂದಿದೆ.

ನಾಳಿನ ಫೈನಲ್ ಪಂದ್ಯ
ಸೋಮವಾರ ಸಂಜೆ 4 ಗಂಟೆಗೆ ಮುಂಬೈ ಸ್ಪೋರ್ಟಿಂಗ್ ಮತ್ತು ಸೌಕರ್ ಉಳ್ಳಾಲ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಆಟಗಾರರಿಗೆ ಸನ್ಮಾನ
ಮಂಗಳೂರು ಸ್ಪೋರ್ಟಿಂಗ್ ತಂಡದ ಮಾಜಿ ಆಟಗಾರರು ಹಾಗೂ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸಿದ ಪತ್ರಕರ್ತರ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News