ಪಿಲಿಕುಳದಲ್ಲಿ ಗೈಡ್‌ಗಳಾಗಲು ಅವಕಾಶ

Update: 2016-04-24 18:29 GMT

ಮಂಗಳೂರು, ಎ.24: ಪಿಲಿಕುಳ ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಬೆಳೆಯುತ್ತಿದೆ. ಜೈವಿಕ ಉದ್ಯಾನವನ, ವಿಜ್ಞ್ಞಾನ ಕೇಂದ್ರ, ಮತ್ಸ್ಯಾಲಯ, ಸಸ್ಯಕಾಶಿ, ಸಂಸ್ಕೃತಿ ಗ್ರಾಮ ಇತ್ಯಾದಿ ಭಾಗಗಳಿಗೆ ಬರುವ ಸಂದರ್ಶಕರಿಗೆ ಅಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯ ಜ್ಞಾನದ ಮಾದರಿಗಳು, ಸಾಂಸ್ಕೃತಿಕ ಮತ್ತು ಪಾರಂಪರಿಕ ಗುತ್ತುಮನೆಯ ವಸ್ತು ಸಂಗ್ರಹಾಲಯ ಮತ್ತು ಕುಶಲಕರ್ಮಿ ಗ್ರಾಮದ ಬಗ್ಗೆ ಗೈಡ್‌ಗಳಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

 ಪಿಲಿಕುಳದ ವಿವಿಧ ಭಾಗಗಳಲ್ಲಿ ಮಾರ್ಗದರ್ಶಕರಾಗಿ ಕ್ರಿಯಾತ್ಮಕವಾಗಿ ಯುವಕರು ತೊಡಗಿಸಿಕೊಳ್ಳಲು ಇದೊಂದು ಅವಕಾಶ. ಕಾಲೇಜು ವಿದ್ಯಾರ್ಥಿಗಳು ಮತ್ತು ಇತರ ಆಸಕ್ತರು ಪ್ರವಾಸಿಗರಿಗೆ ಇಂತಹ ಸೇವೆಯನ್ನು ನೀಡುವ ಮೂಲಕ ವಾಕ್ಚಾತುರ್ಯ ಹಾಗೂ ಸಾರ್ವಜನಿಕರೊಡನೆ ಬೆರೆಯುವ ಕೌಶಲ್ಯಗಳನ್ನು ರೂಢಿಸಿಕೊಳ್ಳಬಹುದು. ಗೈಡ್‌ಗಳಾಗಿ ಸೇವೆ ಸಲ್ಲಿಸಿದ ದಿನಗಳಂದು ಭತ್ತೆಯನ್ನು ನೀಡಲಾಗುತ್ತದೆ. ರಜಾದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಗೈಡ್‌ಗಳಾಗಿ ಸೇವೆ ಸಲ್ಲಿಸಲು ಆಸಕ್ತರಿರುವ 20 ವರ್ಷದಿಂದ 45 ವರ್ಷ ಪ್ರಾಯದವರೆಗಿನವರಿಗೆ ಆದ್ಯತೆ ನೀಡಲಾಗುವುದು. ಪೂರ್ವಭಾವಿ ತರಬೇತಿ ನೀಡಿ ಮಾರ್ಗದರ್ಶಕರನ್ನು ಸಿದ್ಧಪಡಿಸಲಾಗುತ್ತದೆ.

ಈ ಬಗ್ಗೆ ಪಿಲಿಕುಳದ ಆಡಳಿತಾಧಿಕಾರಿ (ಮೊ:9901790670) ಅಥವಾ ಯೋಜನಾಧಿಕಾರಿ (ಮೊ:9686673237)ಯವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News