ದುಬೈಯ ತುಂಬೆ ಸಮೂಹ ಸಂಸ್ಥೆಗೆ ಪ್ರಶಸ್ತಿ

Update: 2016-04-24 18:35 GMT

ದುಬೈ.ಎ.24:ದುಬೈಯಲ್ಲಿರುವ ತುಂಬೆ ಸಮೂಹ ಸಂಸ್ಥೆ 14 ವಿಭಾಗದ ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಸಂಬಂಧಿಸಿದಂತೆ ‘ಪ್ರೊಕ್ಯೂರ್‌ಮೆಂಟ್ ಬೆಸ್ಟ್ ಪ್ರಾಕ್ಟೀಸ್ ಎಪ್ರಿಸಿಯೇಶನ್ ಅವಾರ್ಡ್’ನ್ನು ಪಡೆದುಕೊಂಡಿದೆ. ದುಬೈಯ ಅಟ್ಲಾಂಟಿಸ್ ದಿ ಫಾಮ್‌ನಲ್ಲಿ ನಡೆದ 3ನೆ ಅಂತಾರಾಷ್ಟ್ರೀಯ ಸಮ್ಮೇಳನ (ಐಪಿಎಸ್‌ಸಿ 2016)ದಲ್ಲಿ ತುಂಬೆ ಸಮೂಹ ಸಂಸ್ಥೆಯ ಪರವಾಗಿ ವ್ಯವಸ್ಥಾಪಕ (ಪರ್ಚೇಸ್ ಆ್ಯಂಡ್ ಇನ್‌ವೆಂಟರಿ ವಿಭಾಗ) ಸಿ.ಕೆ.ಝೈನುಲ್ ಆಬಿದಿನ್ ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬ್ಲೂ ಓಶಿಯನ್ ತರಬೇತಿ ಮತ್ತು ಸಲಹಾ ಸಮಿತಿ ಸಂಘಟಿಸಿತ್ತು. ಪ್ರತಿವರ್ಷ ಕಂಪೆನಿಗಳ ಪೂರೈಕೆ ಹಾಗೂ ಗಳಿಕೆ ವಿಭಾಗದಲ್ಲಿ ಉತ್ತಮ ನಾಯತ್ವದ ಗುರುತಿಸುವಿಕೆಗಾಗಿ ಮತ್ತು ಸಾಧನೆಗಾಗಿ ಈ ಪ್ರಶ್ತಸಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪಡೆಯಲು ಕಾರಣರಾದ ತುಂಬೆ ಸಮೂಹ ಸಂಸ್ಥೆಯ ತಂಡಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ತುಂಬೆ ಮೊಹಿಯುದ್ದೀನ್ ಅಭಿನಂದನೆ ಸಲ್ಲಿಸಿದ್ದಾರೆ. ಸಮಾರಂಭದಲ್ಲಿ 450 ಸಂಘಟನೆಗಳ 650 ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News