ಉಳ್ಳಾಲ: ಅಲ್ ಮದೀನ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ

Update: 2016-04-25 13:17 GMT

ಉಳ್ಳಾಲ:ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಆಶ್ರಯದಲ್ಲಿ ಮೂರು ಜೋಡಿಗಳ ಉಚಿತ ಸಮೂಹಿಕ ವಿವಾಹವು ಅಲ್ ಮದೀನ ಹಾಲ್ ತಿಬ್ಲೆಪದವುನಲ್ಲಿ ಸೋಮವಾರ ನಡೆಯಿತು. ವಿವಾಹದ ನೇತೃತ್ವವನ್ನು ಅಲ್ ಮದೀನ ಅದ್ಯಕ್ಷ ಶರಫುಲ್ ಉಲಮ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ , ಸುನ್ನಿ ಜಂಇಯ್ಯತ್ತುಲ್ ಉಲಮಾ ಮುಶಾವರ ಉಪಾಧ್ಯಕ್ಷ ಆಲಿಕುಂಞಿ ಉಸ್ತಾದ್ ಶಿರಿಯ, ಅಶ್ರಫ್ ತಂಙಳ್ ಆದೂರು ವಹಿಸಿದ್ದರು.

 ನರಿಂಗಾನ ಗ್ರಾಮದ ಕಲ್ಲರಕೋಡಿ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರಿ ಆಯಿಷ ಎಂಬ ವಧುವನ್ನು ತಲಪಾಡಿ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮುಹಮ್ಮದ್ ಮುಸ್ತಫ ಎಂಬ ವರನಿಗೆ, ಪುರುಷಗೋಡಿ ನಿವಾಸಿ ಮೊಯಿದಿನ್ ಕುಂಞಿ ಎಂಬವರ ಪುತ್ರಿ ಮರಿಯಮ್ಮ ಪಿ ಎಂಬ ವದುವನ್ನು ಬಾಳೆಪುಣಿ ನಿವಾಸಿ ಉಸ್ಮಾನ್ ಎಂಬವರ ಪುತ್ರ ಜಮಾಲುದ್ದೀನ್ ಎಂಬ ವರನಿಗೆ ಹಾಗೂ ಕಲ್ಮಿಂಜ ನಿವಾಸಿ ಮೊದಿನ್ ಕುಂಞಿ ಎಂಬವರ ಪುತ್ರಿ ಅಸ್ಮಾಕೆ.ಎಂ. ಎಂಬ ವಧುವನ್ನು ಕಾಸರಗೋಡ್ ಬಲಿಪಂಗುಳಿ ನಿವಾಸಿ ಅಬೂಬಕರ್ ಎಂಬವರ ಪುತ್ರ ಮುಹಮ್ಮದ್ ಎಂಬ ವರನಿಗೆ ವಿವಾಹ ಮಾಡಿಕೊಡಲಾಯಿತು.

ಈ ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮುಡಿಪು ಸಂಯುಕ್ತ ಜಮಾಅತ್ ಅಧ್ಯಕ್ಷ ಎಸ್‌ಕೆ ಖಾದರ್ ಹಾಜಿ, ಇಬ್ರಾಹಿಂ ಬಾವಾಹಾಜಿ, ಇಬ್ರಾಹಿಂ ಹಾಜಿ ರಿಯಾದ್, ಹಮೀದ್ ಕಂದಕ್, ಉಂಞಿ ಹಾಜಿ ದೇರಳಕಟ್ಟೆ ಯೂಸುಫ್ ಹಾಜಿ, ಅಬ್ಬಾಸ್ ಹಾಜಿ ಎಲಿಮಲೆ, ಎಸ್ ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವಾಹಾಜಿ,ಪುತ್ತುಬಾವಾ ಹಾಜಿ, ಮಂಜನಾಡಿ ಜುಮಾ ಮಸೀದಿ ಮಾಜಿ ಅಧ್ಯಕ್ಷ ಆಲಿಕುಂಞಿ ಪಾರೆ, ಪರಿಸರವಾದಿ ಬಿ.ಎಸ್.ಹಸನಬ್ಬ, ಕುಂಞಿಬಾವ ಹಾಜಿ, ಜಿ.ಪಂ. ಮಾಜಿ ಸದಸ್ಯ ಎನ್ ಎಸ್. ಕರೀಂ, ಶೌಕತ್ ದೇರಳಕಟ್ಟೆ, ಹಸನ್ ಹಾಜಿ ಸಾಂಬಾರ್‌ತೋಟ ಮೊದಲಾದವರು ಉಪಸ್ಥಿತರಿದ್ದರು.

ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ಅತಿಥಿಗಳನ್ನು ಸ್ವಾಗತಿಸಿದರು.ಅಲ್ ಮದೀನ ಮುದರ್ರಿಸ್ ಮುನೀರ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಅಮ್ಜದಿ ಧನ್ಯವಾದ ಸಮರ್ಪಿಸಿದರು. ಮಹಮ್ಮದ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News