ರಾಷ್ಟ್ರಮಟ್ಟದ ಫುಟ್‌ಬಾಲ್ ಪಂದ್ಯಾಟ : ಮುಂಬಯಿ ಸ್ಪೋಟಿಂಗ್ ಕ್ಲಬ್ ಪ್ರಥಮ

Update: 2016-04-25 16:28 GMT

ಮಂಗಳೂರು, ಎ.25;ಮಂಗಳೂರು ಸೋಟಿಂಗ್ ಕ್ಲಬ್ ನೇತೃತ್ವದಲ್ಲಿ ನಗರದ ಫುಟ್ಬಾಲ್ ಮೈದಾನದಲ್ಲಿ ನಡೆದ 12 ದಿನಗಳ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾಟದ ಫೈನಲ್‌ನಲ್ಲಿ ಮುಂಬಯಿ ಸ್ಪೋರ್ಟಿಂಗ್ ತಂಡವು ಸಾಕರ್ ಉಳ್ಳಾಲ ತಂಡದ ವಿರುದ್ಧ 4-2 ಅಂತರದಲ್ಲಿ ಟ್ರೋಫಿ ಗೆದ್ದುಕೊಂಡಿದೆ.

  ಬೆಸ್ಟ್ ಡಿಸಿಪ್ಲೈನ್ ಟೀಮ್ ಗೌರವವನ್ನು ಚೆನ್ನೈಯ ಫಸ್ಟ್ ಕಿಕ್ ತಂಡ ಪಡೆಯಿತು. ಬೆಸ್ಟ್ ಗೋಲ್ ಕೀಪರ್- ಸಾಕರ್ ಉಳ್ಳಾಲ ತಂಡದ ಆದಿಲ್, ಮುಂಬಯಿಯ ಬೆಸ್ಟ್ ಡಿಫೆಂಡರ್- ಕರಣ್ ಅಮೀನ್, ಬೆಸ್ಟ್ ಮಿಡ್ಲ್ ಫೀಲ್ಡರ್ ಪ್ರವೀಣ್ ಮೆಂಡನ್, ಬೆಸ್ಟ್ ಫಾರ್ವರ್ಡ್ ಶ್ರಾವಣ್ ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದರು.

ತಮಿಳುನಾಡು ಹಾಗೂ ಕೆರಳದ ಅರವಿಂದ್, ವಿಜಯ, ರಿತೇಶ್ ಹಾಗೂ ಆ್ಯಂಟೊನಿ ತೀರ್ಪುಗಾರರಾಗಿ ಸಹಕರಿಸಿದರು

   ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಣ್ಯ ಸಚಿವ ಬಿ. ರಮಾನಾಥ ರೈ, ಕರ್ನಾಟಕದಲ್ಲಿ ಫುಟ್‌ಬಾಲ್ ಕ್ರೀಡೆಗೆ ಹೆಚ್ಚಿನ ಜನಪ್ರೀಯತೆ ಇಲ್ಲ. ಕರ್ನಾಟಕದಲ್ಲಿ ಫುಟ್‌ಬಾಲ್ ಕ್ರೀಡೆಯನ್ನು ನೆರೆ ರಾಜ್ಯಗಳಾದ ಕೇರಳ,. ಗೋವಾದ ರೀತಿಯಲ್ಲಿ ಜನಪ್ರೀಯಗೊಳಿಸಬೇಕಾದ ಅಗ್ತಯವಿದೆ ಎಂದು ಹೇಳಿದರು.

       ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರು ಫುಟ್ಬಾಲ್ ಆಟ ನಡೆಯುತ್ತಿರುವ ಮೈದಾನವನ್ನು ಟರ್ಫ್ ಪಿಚ್‌ನ ಫುಟ್ಬಾಲ್ ಮೈದಾನ ನಿರ್ಮಿಸುವ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆಗೆ ಕಳುಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಕೂಡ ಈ ಬಗ್ಗೆ ಮುತುವರ್ಜಿ ವಹಿಸಬೇಕಿದ್ದು ಮಹಾನಗರಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಶಾಸಕರಾದ ಮೊದಿನ್ ಬಾವ, ಐವನ್‌ಡಿಸೋಜ, ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಕಬಡ್ಡಿ ಆಟಗಾರ ಹೇಮಂತ್ ಶೆಟ್ಟಿ ಮುಂಬಯಿ, ರಾಜ್ಯ ಫುಟ್ಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ವಿಜಯ ಸುವರ್ಣ, ಮುಖಂಡರಾದ ಮಹಾಬಲ ಮಾರ್ಲ, ಕೆ.ಎಸ್.ಮುಹಮ್ಮದ್ ಮಸೂದ್, ನೌಶಾದ್ ಸೂರಲ್ಪಾಡಿ, ಅಬ್ದುಲ್ ಲತೀಫ್ ಮದರ್ ಇಂಡಿಯಾ, ಜಗದೀಶ್ ಅತಿಥಿಗಳಾಗಿದ್ದರು.

 ಸ್ವಾಗತ ಸಮಿತಿ ಅಧ್ಯಕ್ಷ ಕೆ. ಅಶ್ರಫ್ ಸ್ವಾಗತಿಸಿದರು. ಸಂಚಾಲಕ ಸಂತೋಷ್, ಮಂಗಳೂರು ಸ್ಪೋಟಿಂಗ್ ಕ್ಲಬ್‌ನ ಅಧ್ಯಕ್ಷ ಎಂ. ಫಯಾಜ್, ಸಂಚಾಲಕ ಜೀವನ್ ಕುಮಾರ್. ವ್ಯವಸ್ಥಾಪಕ ಹರೀಶ್‌ಚಂದ್ರ ಬೆಂಗ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News