ನೇಜಾರು: ಎಸ್ಸೆಸ್ಸೆಫ್ ವಿಭಾಗೀಯ ಸಮಾವೇಶ

Update: 2016-04-25 18:01 GMT

ಉಡುಪಿ, ಎ.25: ಎಸ್ಸೆಸ್ಸೆಫ್ ಉಡುಪಿ ವಿಭಾಗದ ವತಿಯಿಂದ ‘ಮರಳಿ ಬಾ ಪರಂಪರೆಗೆ’ ಎಂಬ ವಿಭಾಗೀಯ ಸಮಾವೇಶವನ್ನು ಇತ್ತೀಚೆಗೆ ನೇಜಾರು ಜಾಮಿಯಾ ಮಸೀದಿಯಲ್ಲಿ ಆಯೋಜಿಸಲಾಗಿತ್ತು.
ಅಸ್ಸೈಯ್ಯದ್ ಜಾಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುಆ ನೆರವೇ ರಿಸಿದರು. ಸಮಾವೇಶವನ್ನು ನೇಜಾರು ಮಸೀದಿ ಖತೀಬ್ ಉಸ್ಮಾನ್ ಮದನಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿಭಾಗ ಅಧ್ಯಕ್ಷ ಮುಹಮ್ಮದಾಲಿ ಸಅದಿ ರಂಗನಕೆರೆ ವಹಿಸಿದ್ದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಮ್ಜದಿ, ದ.ಕ.ಜಿಲ್ಲಾ ಅಧ್ಯಕ್ಷ ಹಾಫಿಝ್ ಯಾಕುಬ್ ಸಅದಿ, ಸುನ್ನಿ ದಾವತೆ ಇಸ್ಲಾಮಿ ಇದರ ಮುಬಲ್ಲಿಗ್ ಹಾಫಿಝ್ ಸ್ವಾದಿಕ್ ರಝ್ವಿ ಉಪ್ಪಳ ಮಾತನಾಡಿದರು. ಯೂಸುಫ್ ನವಾಝ್ ನೂರಿ ಹೂಡೆ ನಅತೆ ಶರೀಫ್ ಪಠಿಸಿದರು.
ವೇದಿಕೆಯಲ್ಲಿ ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಅದಿ, ಕಟಪಾಡಿ ಸೆಕ್ಟರ್ ಅಧ್ಯಕ್ಷ ರಶೀದ್ ಮುಸ್ಲಿಯಾರ್, ಮಣಿಪಾಲ ಅಧ್ಯಕ್ಷ ಹನೀಫ್ ಮದನಿ, ಅಬೂಬಕರ್ ಹಾಜಿ ನೇಜಾರ್, ಹಂಝತ್ ಹೆಜಮಾಡಿ ಕೋಡಿ, ಕೆ.ಎಂ.ಮನ್ಸೂರ್ ದೊಡ್ಡಣಗುಡ್ಡೆ, ಕೆ.ಪಿ.ಇಬ್ರಾಹೀಂ ಮಟಪಾಡಿ, ಮಿಸ್ಬಾಹಿ ಮಣಿಪುರ, ರಝಾಕ್ ಉಸ್ತಾದ್ ಸಾಸ್ತಾನ, ಶಂಶುದ್ದೀನ್ ರಂಗನಕೆರೆ, ಅಲ್ಲಾಹುದ್ದೀನ್ ಸಾಹೇಬ್ ಹೊನ್ನಾಳ, ಕಯ್ಯೂಮ್ ಮಲ್ಪೆ, ಸಿದ್ದೀಕ್ ಅಂಬಾಗಿಲು, ಬಿಲಾಲ್, ಇಬ್ರಾಹೀಂ ಆರ್.ಕೆ., ಆಸಿಫ್ ಸರಕಾರಿಗುಡ್ಡೆ, ಶಾಹುಲ್, ಮಜೀದ್ ಕಟಪಾಡಿ, ಶಾಹಿದ್ ನೇಜಾರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ನೌಫಾಲ್ ಮದನಿ ಸ್ವಾಗತಿಸಿದರು. ವಿಭಾಗ ಕಾರ್ಯದರ್ಶಿ ನಾಸಿರ್ ಬಿ.ಕೆ. ವಂದಿ ಸಿದರು. ಸುಬುಹಾನ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News