ಕ್ಷಯರೋಗ ಮಾಹಿತಿ ಕಾರ್ಯಾಗಾರ

Update: 2016-04-25 18:03 GMT


ಉಡುಪಿ, ಎ.25: ಸಮುದಾಯ ಆರೋಗ್ಯಕೇಂದ್ರ ನಿಟ್ಟೆ ಎನ್‌ಪಿಸಿಡಿಸಿಎಸ್ ಘಟಕ ಮತ್ತು ಬಿ.ಎಸ್.ಕೆ ಗೇರು ಬೀಜ ಕಾರ್ಖಾನೆ ಇವುಗಳ ಸಹಯೋಗದಲ್ಲಿ ಕ್ಷಯರೋಗದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಉಚಿತ ಮಧು ಮೇಹ ಹಾಗೂ ರಕ್ತದೊತ್ತಡ ಕಾರ್ಯಾಗಾರವನ್ನು ಇತ್ತೀಚೆಗೆ ಕಾರ್ಕಳ ತಾಲೂಕಿನ ಮಂಜರಪಲ್ಕೆಕೆ ಬಿಎಸ್‌ಕೆ ಗೇರುಬೀಜ ಕಾರ್ಖಾನೆ ಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್ ಕ್ಷಯ ರೋಗದ ಗುಣ ಲಕ್ಷಣಗಳು ಮತ್ತು ಡಾಟ್ಸ್ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಎನ್‌ಪಿಸಿಡಿಸಿಎಸ್ ಘಟಕದ ವೈದ್ಯಾಧಿಕಾರಿ ಡಾ. ಶೈಲೇಶ್ ಕುಮಾರ್ ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಗೋಪಾಲ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಕೊಳಂಬೆ ಮಸೀದಿಗೆ ಪದಾಧಿಕಾರಿಗಳ ಆಯ್ಕೆ
ಉಡುಪಿ, ಎ.25: ಬೈಲೂರು ಕೊಳಂಬೆ ಶಾಂತಿ ನಗರದ ಮದೀನ ಮಸೀದಿಯ ವಾರ್ಷಿಕ ಮಹಾ ಸಭೆಯಲ್ಲಿ 2016- 19ನೆ ಸಾಲಿನ ನೂತನ ಪದಾ ಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಅಬ್ದುಲ್ ಗಫೂರ್ ಸಾಹೇಬ್, ಅಧ್ಯಕ್ಷರಾಗಿಶೇಖ್ ಅಬ್ದುಲ್ ಶಮೀಮ್ ಶಾಂತಿ ನಗರ, ಉಪಾಧ್ಯಕ್ಷರಾಗಿ ಅಖ್ತರ್ ಅಹ್ಮದ್ ಅಬ್ಬಾಸ್,ಕಾರ್ಯದರ್ಶಿ ಯಾಗಿ ಮುಹಮ್ಮದ್ ಫಿರೋಝ್ ಉದ್ಯಾವರ, ಜತೆ ಕಾರ್ಯದರ್ಶಿಯಾಗಿ ಅಬ್ದುಸ್ಸಲಾಂ ಸಾಹೇಬ್, ಕೋಶಾಧಿಕಾರಿ ಯಾಗಿ ಝಾಕೀರ್ ಹಸನ್ ಸಾಹೇಬ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಉಸ್ಮಾನ್ ಸಾಹೇಬ್, ಸಾದಿಕ್ ಯೂಸುಫ್, ನಾಸಿರ್ ಖಾನ್, ರಹಮತುಲ್ಲಾ ಅಬ್ದುಲ್ ಖಾದರ್, ಮುಹಮ್ಮದ್ ಯಾಸೀನ್, ಶರ್ಫುಲ್ಲಾ ಸಾಹೇಬ್, ಮುಹಮ್ಮದ್ ಫಾಜಿಲ್, ಅಬ್ದುಲ್ ಗಫೂರ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News