ಟ್ರಾನ್ಸ್‌ಫಾರ್ಮರ್‌ಗೆ ಲಾರಿ ಢಿಕ್ಕಿ: ವಿದ್ಯುತ್ ವ್ಯತ್ಯಯ

Update: 2016-04-25 18:40 GMT

ಪಡುಬಿದ್ರೆ, ಎ.25: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರೆಯ ಕಾರ್ಕಳ ರಸ್ತೆ ತಿರುವಿನ ಬಳಿ ಲಾರಿಯೊಂದು ರಸ್ತೆಯ ಬದಿಯ ಟ್ರಾನ್ಸ್‌ಫಾರ್ಮರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪರಿಸರದಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು.

ಉಡುಪಿಯಿಂದ ಮಂಗಳೂರು ಕಡೆಗೆ ಆಲೂಗಡ್ಡೆ ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯು ಸುಮಾರು 1:30 ರ ವೇಳೆಗೆ ನಿದ್ರೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ಗೆ ಢಿಕ್ಕಿ ಹೊಡೆಯಿತು. ಢಿಕ್ಕಿಯ ಪರಿಣಾಮ ಟ್ರಾನ್ಸ್ ಫಾರ್ಮರ್ ರಸ್ತೆಗೆ ಬಿದ್ದು ಹಾನಿಯಾಗಿದೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ. ಲಾರಿ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಮೆಸ್ಕಾಂ ಅಧಿಕಾರಿಗಳ ಮಾರ್ಗದರ್ಶನದಂತೆ ಹಾನಿಯಾದ ಟ್ರಾನ್ಸ್‌ಫಾರ್ಮರನ್ನು ತೆರವುಗೊಳಿಸಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಯಿತು. ಲಾರಿ ಮಾಲಕರೊಂದಿಗೆ ಮೆಸ್ಕಾಂಗೆ ಆದ ನಷ್ಟವನ್ನು ಭರಿಸುವ ಬಗ್ಗೆ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News