ಅಂಗಡಿಗಳಿಗೆ ದಾಳಿ: ನಿಷೇಧಿತ ಪ್ಲಾಸ್ಟಿಕ್ ವಶ

Update: 2016-04-25 18:50 GMT

ಸುಳ್ಯ, ಎ.25: ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದ್ದು, ನಗ ರಾಭಿವೃದ್ಧಿ ಕೋಶದ ನಿರ್ದೇಶನದಂತೆ ಅಧಿಕಾರಿಗಳು ಅಂಗಡಿ ಮಳಿಗೆಗಳಿಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ನ್ನು ವಶಕ್ಕೆ ಪಡೆದಿದ್ದಾರೆ.

ನಿಷೇಧಿತ ಪ್ಲಾಸ್ಟಿಕ್‌ನ್ನು ವಶಕ್ಕೆ ಪಡೆ ಯುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶ ದಿಂದ ಸುಳ್ಯ ನಪಂಗೆ ಆದೇಶ ಬಂದಿದ್ದು, ಅಧಿಕಾರಿಗಳು ಪ್ಲಾಸ್ಟಿಕ್ ಬ್ಯಾನರ್, ಫ್ಲೆಕ್ಸ್, ಡಿಜಿಟಲ್ ಪ್ರಿಂಟಿಂಗ್ಸ್, ಬಂಟಿಂಗ್ಸ್, ಕ್ಯಾರಿ ಬ್ಯಾಗ್‌ಗಳನ್ನು ವಶಕ್ಕೆ ಪಡೆದರು. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಆರೋಗ್ಯ ನಿರೀಕ್ಷಕ ರವಿಚಂದ್ರ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News