ವಿಶ್ವಬ್ರಾಹ್ಮಣ ಸಮಾಜದ ಒಗ್ಗಟ್ಟು, ಪರಿಶ್ರಮ ಎಲ್ಲಾ ಸಮಾಜಕ್ಕೂ ಮಾದರಿ: ವಿಪಕ್ಷ ನಾಯಕ ಜಗದೀಶ ಶೆಟ್ಟರ್

Update: 2016-04-26 09:07 GMT

ಕಿನ್ನಿಗೋಳಿ, ಎ.26: ವಿಶ್ವಬ್ರಾಹ್ಮಣ ಸಮಾಜದ ಒಗ್ಗಟ್ಟು ಹಾಗೂ ಪರಿಶ್ರಮ ಎಲ್ಲಾ ಸಮಾಜಕ್ಕೂ ಮಾದರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಹೇಳಿದರು.

ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ತ್ರಿ ದಶಮಾನೋತ್ಸವ ಸಮಾರೋಪ ಸಮಾರಂಭ ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 

ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳು ಶೈಖ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ, ಕರಾವಳಿಯ ವೈಶಿಷ್ಟ್ಯ ಪೂರ್ಣ ಜಿಲ್ಲೆಗಳು ಎಂದು ಗುರುತಿಸಿಕೊಂಡಿದೆ ಎಂದರು.

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಶುಭಾಶಂಸನೆಗೈದರು. ನಿವೃತ್ತ ಪ್ರಾಂಶುಪಾಲಪ್ರೊ. ಕೆ.ಎ. ಗಂಗಾಧರ ಆಚಾರ್ಯ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಕಟಪಾಡಿ ವೇದಮೂರ್ತಿ ಎನ್. ಶ್ರೀಧರ್ ಪುರೋಹಿತ್, ನಿವೃತ್ತ ಉಪತಹಶೀಲ್ದಾರ ಕೆ. ವಸಂತ ಆಚಾರ್ಯ ಕಾರ್ಕಳ, ನಿವೃತ್ತ ಶಿಕ್ಷಕ ಅಚ್ಯುತ ಆಚಾರ್ಯ ಅವರನ್ನು  ಕೊಲಕಾಡಿ ಅವರನ್ನು ಸನ್ಮಾನಿಸಲಾಯಿತು.

ಯುವ ಪ್ರತಿಭೆಗಳಾದ ಪ್ರಸಿದ್ಧ ಸ್ಯಾಕ್ಸಾಫೋನ್ ವಾದಕ ಸತೀಶ್ ಆಚಾರ್ಯ ಸುರುಳಿ ಹಾಗೂ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ವೈದ್ಯಾಧಿಕಾರಿ ಡಾ. ತ್ರೀವೇಣಿ ಆಚಾರ್ಯ ಅವರನ್ನು ಪುರಸ್ಕರಿಸಲಾಯಿತು.ಬಳ್ಕುಂಜೆ ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಸತೀಶ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.

  ಈ ಸಂದರ್ಭ ದ.ಕ. ಉಡುಪಿ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಯುವಜನ ಸೇವಾ ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಳ ಮೊಕ್ತೇಸರ ಬಿ. ಸೂರ್ಯ ಕುಮಾರ್, ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಕೆ. ವಿಶ್ವನಾಥ ಆಚಾರ್ಯ, ಜಿ.ಪಂ ಸದಸ್ಯೆ ಕಸ್ತೂರಿ ಪಂಜ, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಸುಧಾಕರ್, ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಎಂ. ಪೃಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
 

 ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಬಿ. ಸುರೇಶ್ ವಾರ್ಷಿಕ ವರದಿ ವಾಚಿಸಿದರು. ಏಳಿಂಜೆ ಭಾಸ್ಕರ ಆಚಾರ್ಯ ವಂದಿಸಿದರು. ಪ್ರಶಾಂತ ಆಚಾರ್ಯ ಕೊಲೆಕಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News